ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕಪ್ಪಗೆ, ಸುಂದರವಾಗಿ ಕಾಣಬೇಕೆನ್ನುವ ಕಾರಣಕ್ಕೆ ಕಾಡಿಗೆ ಹಚ್ಚುತ್ತಾರೆ. ಆದ್ರೆ ಮನೆ ಮದ್ದಿನಿಂದ ಐಬ್ರೋವನ್ನು ಮತ್ತಷ್ಟು ಆಕರ್ಷಕವಾಗಿ ಮಾಡಬಹುದು.
ಆಲೋವೇರಾ : ಆಲೋವೇರಾ ಜೆಲ್ ಹುಬ್ಬನ್ನು ಮತ್ತಷ್ಟು ದಟ್ಟವಾಗಿ ಮಾಡುವ ಶಕ್ತಿ ಹೊಂದಿದೆ. ಕಪ್ಪಗೆ ಹಾಗೂ ದಟ್ಟಗೆ ಐಬ್ರೋ ಬೇಕೆನ್ನುವವರು ಮೊದಲು ಆಲೋವೇರಾ ಎಲೆಯನ್ನು ತೆಗೆದುಕೊಳ್ಳಿ. ಅದರಲ್ಲಿರುವ ಜೆಲ್ ತೆಗೆದು, ಐಬ್ರೋಗೆ ಹಚ್ಚಿಕೊಳ್ಳಿ. ಸುಮಾರು 15-20 ನಿಮಿಷಗಳ ಕಾಲ ಹಾಗೆ ಬಿಡಿ. ನಂತ್ರ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ದಿನ ಹೀಗೆ ಮಾಡಿ.
ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ಚರ್ಮಕ್ಕೆ ಬಹಳ ಅನುಕೂಲ. ತಲೆ ಕೂದಲಿಗೊಂದೆ ಅಲ್ಲ ಐಬ್ರೋಕ್ಕೆ ಕೂಡ ತೆಂಗಿನ ಎಣ್ಣೆ ಬೆಸ್ಟ್. ರಾತ್ರಿ ತೆಂಗಿನ ಎಣ್ಣೆಯನ್ನು ಹುಬ್ಬಿಗೆ ಹಚ್ಚಿ ಮಲಗುವುದು ಒಳ್ಳೆಯದು.
ಈರುಳ್ಳಿ ರಸ : ಸುಂದರ ಹಾಗೂ ದಟ್ಟ ಐಬ್ರೋ ಆಸೆಯುಳ್ಳವರು ಈರುಳ್ಳಿ ರಸ ಬಳಸಬಹುದು. ಈರುಳ್ಳಿ ರಸವನ್ನು ಹುಬ್ಬಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ತೊಳೆಯಿರಿ. ತೊಳೆಯಲು ಗುಲಾಬಿ ರಸವನ್ನು ನೀವು ಬಳಸಬಹುದು.
ಹಾಲು : ತೆಳ್ಳಗಿನ ಹುಬ್ಬು ನಿಮ್ಮದಾಗಿದ್ದರೆ ನೀವು ಹಾಲನ್ನು ಬಳಸಬಹುದು. ಹಾಲನ್ನು ಮೊದಲು ಬಿಸಿ ಮಾಡಿ. ನಂತ್ರ ಅದು ತಣ್ಣಗಾಗಲು ಬಿಡಿ. ಆಮೇಲೆ ಹುಬ್ಬಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಮುಖ ತೊಳೆಯಿರಿ.