ಮುಖದಲ್ಲಿ ಅನಗತ್ಯ ಕೂದಲು ಇದ್ದರೆ ಮುಖದ ಅಂದವೇ ಹಾಳಾಗುತ್ತದೆ. ಹಾರ್ಮೋನುಗಳ ಕಾರಣದಿಂದ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಂಶಪಾರಂಪರ್ಯವಾಗಿ ಕೂಡ ಇದು ಬರುತ್ತದೆ.
ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿ ಈ ಕೂದಲನ್ನು ಕಡಿಮೆ ಮಾಡಿಕೊಳ್ಳಬಹುದು.
* 2 ಟೇಬಲ್ ಚಮಚ ಹೆಸರು ಕಾಳು ಹಿಟ್ಟು, 1-2 ಟೇಬಲ್ ಸ್ಪೂನ್ ರೋಸ್ ವಾಟರ್, 1 ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸ. ಒಂದು ಬೌಲ್ ಗೆ ಹೆಸರುಕಾಳಿನ ಹಿಟ್ಟು ಹಾಗೂ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಲಿಂಬೆ ಹಣ್ಣಿನ ರಸ ಹಾಕಿ ಮಿಶ್ರಣ ಮಾಡಿ. ನಂತರ ಇದನ್ನು ಕೂದಲು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ನಿಯಮಿತವಾಗಿ ಮಾಡುತ್ತಾ ಬಂದರೆ ಕೂದಲು ಕಡಿಮೆಯಾಗುತ್ತದೆ.
*2 ಹದ ಗಾತ್ರ ಈರುಳ್ಳಿ, 10-ರಿಂದ 12 ತುಳಸಿ ಎಲೆ. ಇವರೆಡನ್ನೂ ಚೆನ್ನಾಗಿ ಕುಟ್ಟಿ ಮಿಶ್ರಣ ತಯಾರಿಸಿಕೊಳ್ಳಿ. ಕೂದಲು ಇರುವ ಕಡೆ ತೆಳುವಾಗಿ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡಿ.
* 1 ಟೀ ಸ್ಪೂನ್ ಲ್ಯಾವೆಂಡರ್ ಎಣ್ಣೆ, 4-6 ಹನಿ ಟೀ ಟ್ರೀ ಆಯಿಲ್. ಒಂದು ಬೌಲ್ ಗೆ ಇವೆರಡನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಹತ್ತಿಯ ಸಹಾಯದಿಂದ ಮುಖದಲ್ಲಿ ಕೂದಲಿರುವ ಕಡೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ.
*1 ಟೇಬಲ್ ಸ್ಪೂನ್-ಜೇನುತುಪ್ಪ, 2 ಟೇಬಲ್ ಸ್ಪೂನ್ ಸಕ್ಕರೆ, 1 ಟೇಬಲ್ ಸ್ಪೂನ್ ನೀರು ಒಂದು ಬೌಲ್ ಗೆ ಜೇನುತುಪ್ಪ, ಸಕ್ಕರೆ, ನೀರು ಇವಿಷ್ಟನ್ನು ಹಾಕಿ. ಮೈಕ್ರೋವೇವ್ ನಲ್ಲಿ 30 ಸೆಂಕಡುಗಳ ಕಾಲ ಸಕ್ಕರೆ ಕರಗುವವರಗೆ ಇಡಿ. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಮುಖದಲ್ಲಿ ಕೂದಲಿರುವ ಕಡೆ ಇದನ್ನು ಹಚ್ಚಿಕೊಳ್ಳಿ.
ಒಂದು ಸ್ಟ್ರಿಪ್ ಕ್ಲೋತ್ ಅನ್ನು ಈ ಮಿಶ್ರಣ ಹಚ್ಚಿದ ಮೇಲೆ ಇಡಿ. ಕೆಲವು ಸೆಂಕೆಂಡುಗಳ ನಂತರ ವಿರುದ್ಧ ದಿಕ್ಕಿನಿಂದ ಈ ಸ್ಟ್ರಿಪ್ ಅನ್ನು ಎಳೆಯಿರಿ. ಇದರಿಂದ ಕೂದಲು ನಿವಾರಣೆಯಾಗತ್ತದೆ. ಮೊಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.