ವಿಶ್ವದ ಅತಿ ಸಿರಿವಂತರ ಪಟ್ಟಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಪಾರ ದೈವ ಭಕ್ತರೂ ಹೌದು. ತಿರುಪತಿ, ಗುರುವಾಯೂರು ಸೇರಿದಂತೆ ಹಲವು ದೇಗುಲಗಳಿಗೆ ಅವರು ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡುತ್ತಿರುತ್ತಾರೆ.
ಕೇರಳದ ಗುರುವಾಯೂರಿನ ಶ್ರೀ ಕೃಷ್ಣನ ಪರಮ ಭಕ್ತರಾಗಿರುವ ಮುಕೇಶ್ ಅಂಬಾನಿಯವರು ಇದೀಗ ದೇಗುಲದ ಅನ್ನದಾನಕ್ಕಾಗಿ 1.5 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅಂಬಾನಿಯವರ ಕುಟುಂಬ ಸಂತಸದಲ್ಲಿ ಮುಳುಗಿದೆ.