ಷೇರುಪೇಟೆಯಲ್ಲಿ ಇಂದು ಭಾರಿ ಕುಸಿತ ಕಂಡು ಬಂದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳ ಇಳಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್ 388.20 ಪಾಯಿಂಟ್ ಇಳಿಕೆಯೊಂದಿಗೆ 58,576.37ಕ್ಕೆ ಕೊನೆಗೊಂಡಿದೆ. ನಿಫ್ಟಿ ಸೂಚ್ಯಂಕ 144.65 ಪಾಯಿಂಟ್ ಕುಸಿತದೊಂದಿಗೆ 17,530.30ಕ್ಕೆ ಅಂತ್ಯವಾಗಿದೆ.
ವಲಯವಾರು ಸೂಚ್ಯಂಕಗಳಲ್ಲಿ ಮಿಶ್ರ ವಹಿವಾಟು ಕಂಡುಬಂದಿದೆ. ಇಂದಿನ ವಹಿವಾಟಿನ ನಂತರ ಖಾಸಗಿ ಬ್ಯಾಂಕ್, ಹಣಕಾಸು ಸೇವೆಗಳು ಮತ್ತು ನಿಫ್ಟಿ ಬ್ಯಾಂಕ್ ವಲಯಗಳು ಚೇತರಿಕೆ ಕಂಡಿವೆ. ಇದನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳು ನಿರಾಸೆ ಅನುಭವಿಸಿವೆ. ನಿಫ್ಟಿ ಆಟೋ, ಹಣಕಾಸು ಸೇವೆಗಳು, ನಿಫ್ಟಿ ಎಫ್ಎಂಸಿಜಿ, ಐಟಿ, ಮೀಡಿಯಾ, ಮೆಟಲ್, ಫಾರ್ಮಾ, ಪಿಎಸ್ಯು ಬ್ಯಾಂಕ್, ರಿಯಾಲ್ಟಿ, ಹೆಲ್ತ್ಕೇರ್, ತೈಲ ಮತ್ತು ಅನಿಲ ವಲಯಗಳು ಇಂದಿನ ವಹಿವಾಟಿನ ನಂತರ ನಿರಾಸೆ ಅನುಭವಿಸಿವೆ.
ಇವತ್ತಿನ ಟಾಪ್ ವಹಿವಾಟುದಾರರಲ್ಲಿ ಆಕ್ಸಿಸ್ ಬ್ಯಾಂಕ್ ಅತಿ ಹೆಚ್ಚು ಲಾಭ ಪಡೆದುಕೊಂಡಿದೆ. ಆಕ್ಸಿಸ್ ಬ್ಯಾಂಕ್ ಷೇರುಗಳು ಮೌಲ್ಯದಲ್ಲಿ ಶೇ.1.60 ರಷ್ಟು ಹೆಚ್ಚಳವಾಗಿದ್ದು, ದಿನದ ಅಂತ್ಯಕ್ಕೆ ಷೇರುಗಳ ಬೆಲೆ 798ಕ್ಕೆ ತಲುಪಿತ್ತು. ಇದಲ್ಲದೆ ಕೋಟ್ಯಾಕ್ ಬ್ಯಾಂಕ್, ಪವರ್ ಗ್ರಿಡ್, ಮಾರುತಿ, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಂ & ಎಂ ಮತ್ತು ಎಚ್ಡಿಎಫ್ಸಿ ಷೇರುಗಳು ಚೇತರಿಕೆಯಲ್ಲಿ ಸಾಗಿವೆ.
ಇವತ್ತಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಕಂಪನಿ ಟಾಪ್ ಲೂಸರ್ ಎನಿಸಿಕೊಂಡಿದೆ. ಇದಲ್ಲದೆ ವಿಪ್ರೋ, ಟೆಕ್ ಮಹೀಂದ್ರಾ, ಭಾರ್ತಿ ಏರ್ಟೆಲ್, ರಿಲಯನ್ಸ್, ಎಲ್ಟಿ, ಬಜಾಜ್ ಫಿನ್ಸರ್ವ್, ಎಚ್ಯುಎಲ್, ಇನ್ಫೋಸಿಸ್, ಅಲ್ಟ್ರಾ ಕೆಮಿಕಲ್, ಐಟಿಸಿ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಸನ್ ಫಾರ್ಮಾ, ಡಾ ರೆಡ್ಡೀಸ್, ಎಸ್ಬಿಐ, ಎನ್ಟಿಪಿಸಿ, ಎಚ್ಸಿಎಲ್ ಟೆಕ್, ಎಚ್ಡಿಎಫ್ಸಿ ಬ್ಯಾಂಕ್, ಟಿಸಿಎಸ್, ನೆಸ್ಲೆ ಇಂಡಿಯಾ ಮತ್ತು ಟೈಟಾನ್ ಸೇರಿದಂತೆ ಹಲವು ಕಂಪನಿಗಳ ಷೇರುಗಳ ಮೌಲ್ಯ ಇಳಿಮುಖವಾಗಿದೆ.