
ನವೀಕರಿಸಿದ ಬಸ್ ನಿಲ್ದಾಣಗಳು ಕೇವಲ ಸೊಗಸಾದ ವಿನ್ಯಾಸವನ್ನು ಮಾತ್ರ ಹೊಂದಿರುವುದಿಲ್ಲ. ಆದರೆ, ಅವುಗಳು ವ್ಯಾಯಾಮ ಪಟ್ಟಿಯಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಅವುಗಳ ಮೇಲ್ಛಾವಣಿಯನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ನೋಡಲು ಬಹಳ ಅದ್ಭುತವಾಗಿದೆ ಎಂದು ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಆನಂದ್ ಮಹೀಂದ್ರಾರ ಈ ಟ್ವೀಟ್‌ಗೆ ಉತ್ತರಿಸಿದ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ನಗರಗಳಿಗೆ ಆರಾಮದಾಯಕವಾದ ಸಾರ್ವಜನಿಕ ಸಾರಿಗೆ ಮತ್ತು ವಿನ್ಯಾಸದ ಸೌಂದರ್ಯದ ಉತ್ತಮ ಪ್ರಜ್ಞೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಹಾಗಂತ ನೆಟ್ಟಿಗರೆಲ್ಲರೂ ಹೊಸ ಬಸ್ ನಿಲ್ದಾಣಗಳ ನಿರೀಕ್ಷೆಯೊಂದಿಗೆ ಪ್ರಭಾವಿತರಾಗಲಿಲ್ಲ. ಅವರ ಮುಖ್ಯ ಕಾಳಜಿಯು ಅಂತಹ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳ ನಿರ್ವಹಣೆಯಾಗಿದೆ. ಇಂತಹ ಹೈಟೆಕ್ ಬಸ್ ನಿಲ್ದಾಣಗಳನ್ನು ಅಧಿಕಾರಿಗಳು ನಿರ್ವಹಣೆ ಮಾಡದ ಕಾರಣ ಕೆಲವು ತಿಂಗಳುಗಳ ನಂತರ ಹೇಗೆ ನಿಷ್ಪ್ರಯೋಜಕ ಅಥವಾ ಹಾನಿಯಾಗುತ್ತದೆ ಎಂಬ ಬಗ್ಗೆ ವಿವರಿಸಿದ್ದಾರೆ.
ಶಿವಾಜಿ ಪಾರ್ಕ್‌ನಲ್ಲಿ ಅವುಗಳನ್ನು ಉಳಿಸಿಕೊಳ್ಳಲು ವಿಫಲವಾದ, ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವ ನವೀನ ಮಾರ್ಗಗಳು ಎಂದು ಬಳಕೆದಾರರು ದೂರಿದ್ದಾರೆ. ಕೆಲವು ಜನರು ಬಸ್ ನಿಲ್ದಾಣಗಳಿಗೆ ಕೆಲವು ವಿನ್ಯಾಸದ ಬದಲಾವಣೆಗಳನ್ನು ಸೂಚಿಸಿದ್ದಾರೆ.