ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್, ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ತನ್ನ ಆಗಿನ ನಾಯಕರಾಗಿದ್ದ ಸೌರವ್ ಗಂಗೂಲಿ ಮತ್ತು ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಒಳಗೊಂಡ ಉಲ್ಲಾಸದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
2008ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 67 ರನ್‌ಗಳ ಅತ್ಯಲ್ಪ ಸ್ಕೋರ್‌ಗೆ ಔಟಾದ ನಂತರ, ಅಖ್ತರ್ ಮೊದಲ ಓವರ್‌ನಲ್ಲಿಯೇ ತೆಂಡೂಲ್ಕರ್‌ರನ್ನು ಔಟ್ ಮಾಡಿದ್ದರು.
ಫುಡ್ ಪ್ಯಾಕೆಟ್ ಮೇಲೆ ʼಅರೇಬಿಕ್ʼ ಭಾಷೆ ಇರುವುದರ ಹಿಂದಿದೆ ಈ ಕಾರಣ
ಪಂದ್ಯ ಆರಂಭವಾದಾಗ ವಾತಾವರಣ ವಿದ್ಯುಕ್ತವಾಗಿತ್ತು. ಕೆಕೆಆರ್ ಅತ್ಯಲ್ಪ ಮೊತ್ತಕ್ಕೆ ಕುಸಿದಿತ್ತು. ಸ್ಟೇಡಿಯಂ ಕ್ರೀಡಾಭಿಮಾನಿಗಳಿಂದ ತುಂಬಿ ತುಳುಕುತಿತ್ತು. ಪಂದ್ಯದ ಮೊದಲು, ನಾವು ಸೌಹಾರ್ದಯುತವಾಗಿ ಮಾತನಾಡುತ್ತಿದ್ದೆವು. ತಾನು ಮತ್ತು ಸಚಿನ್ ಇಬ್ಬರೂ ಪರಸ್ಪರ ಶುಭಾಶಯ ಕೋರಿದ್ದಾಗಿ ಅಖ್ತರ್ ಹೇಳಿದ್ದಾರೆ.
ಆದರೆ, ಮೊದಲ ಓವರ್‌ನಲ್ಲಿಯೇ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿ, ದೊಡ್ಡ ತಪ್ಪು ಮಾಡಿದ್ದಾಗಿ ಅಖ್ತರ್ ಹೇಳಿದ್ದಾರೆ. ಫೈನ್ ಲೆಗ್‌ನಲ್ಲಿದ್ದಾಗ ಸಾಕಷ್ಟು ನಿಂದನೆಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಬಳಿಕ ಸೌರವ್ ಗಂಗೂಲಿ, ಈ ಜನರು ನಿನ್ನನ್ನು ಕೊಲ್ಲುತ್ತಾರೆ, ಮಿಡ್ ವಿಕೆಟ್‌ಗೆ ಬಾ ಎಂದು ಹೇಳಿದರಂತೆ.
ಮುಂಬೈನ ಜನರ ಬಗ್ಗೆ ಮಾತನಾಡಿದ ಅಖ್ತರ್, ವಾಂಖೆಡೆಯಲ್ಲಿ ಆಡಲು ತುಂಬಾ ಸಂತೋಷವಾಗಿದೆ. ಏಕೆಂದರೆ ಯಾರೂ ತನ್ನ ದೇಶವನ್ನು (ಪಾಕಿಸ್ತಾನ) ನಿಂದಿಸಲಿಲ್ಲ. ಅವರು ಯಾವುದೇ ಜನಾಂಗೀಯ ಹೇಳಿಕೆಯನ್ನು ನೀಡಲಿಲ್ಲ. ವಾಂಖೆಡೆಯಲ್ಲಿ ನೆರೆದಿದ್ದ ಜನಸಮೂಹ ತುಂಬ ಭಾವುಕವಾಗಿತ್ತು ಎಂದು ಶೋಯೆಬ್ ಅಖ್ತರ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.