ಉಡುಪಿ: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಇದೀಗ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಬಹುದು ಎಂದು ಹೇಳಿಕೆ ನೀಡುವುದರ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನ ಕೊರಗಜ್ಜ ಕ್ಷೇತ್ರದಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಂದೆ ಹಿಂದುಗಳೆಲ್ಲರೂ ಒಂದಾದರೆ ಕೇಸರಿ ಧ್ವಜವೇ ರಾಷ್ಟ್ರ ಧ್ವಜವಾಗಲುಬಹುದು ಎಂದು ಹೇಳಿದ್ದಾರೆ.
ಪೊಲೀಸರ ಬಳಿ ಬಂದು ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಯುಕೆಜಿ ಬಾಲಕ
ಕಾಂಗ್ರೆಸ್ ನ ತುಷ್ಟೀಕರಣ ನೀತಿಯಿಂದ ದ್ವಜ ತುಂಡಾಯಿತು. ಈಗ ರಾಷ್ಟ್ರಧ್ವಜ ಅಂತಾ ಇದೆ, ಅದಕ್ಕೆ ಗೌರವ ಕೊಡೋಣ. ಆದರೆ ರಾಷ್ಟ್ರಧ್ವಜ ಬದಲಾಯಿಸಲು ಸಾಧ್ಯವಿಲ್ಲ ಎಂದೇನೂ ಇಲ್ಲ. ಈ ಧ್ವಜ ಬರುವುದಕ್ಕೂ ಮುನ್ನ ಬ್ರೀಟೀಷರ ಧ್ವಜ ಇತ್ತು. ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಮುಂದೆ ಈಗಿರುವ ರಾಷ್ಟ್ರಧ್ವಜವನ್ನು ಬದಲಿಸಬಹುದು. ಅಗತ್ಯವಾಗಿ ಬದಲಿಸಬೇಕಾಗುತ್ತದೆ. ರಾಜ್ಯಸಭೆ, ಸಂಸತ್ ನಲ್ಲಿ 2/3 ಬಹುಮತ ಬಂದರೆ ಈಗಿರುವ ರಾಷ್ಟ್ರಧ್ವಜವನ್ನು ಬದಲಿಸಬಹುದು ಎಂದು ಹೇಳಿದ್ದಾರೆ.
ಆರ್.ಎಸ್.ಎಸ್ ಮುಖಂಡರ ಈ ಹೇಳಿಕೆ ರಾಜ್ಯಾದ್ಯಂತ ಹೊಸ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.