ಮೈಸೂರು: ಕಾಂಗ್ರೆಸ್ ನಲ್ಲಿ ಮೂಲ-ವಲಸಿಗ ಎಂಬ ಪ್ರಶ್ನೆಯೂ ಇಲ್ಲ, ಮುಂದಿನ ಸಿಎಂ ಬಗ್ಗೆ ಚರ್ಚೆಯೂ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿರುವಾಗ ಈಗಲೇ ಆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ʼಕೈʼ ಸಿಎಂ ಅಭ್ಯರ್ಥಿ ಕಿತ್ತಾಟಕ್ಕೆ ತೆರೆ ಎಳೆಯುವ ಯತ್ನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹೊರಗಿನಿಂದ ಬಂದವರು, ಮೂಲ ಕಾಂಗ್ರೆಸ್ಸಿಗರು ಎಂಬ ಅಸಮಾಧಾನವಿಲ್ಲ. ನಾನು ಕಾಂಗ್ರೆಸ್ ಗೆ ಬಂದು ಮುಖ್ಯಮಂತ್ರಿಯಾದ ಮೇಲೆ ವಲಸಿಗ ಎಂಬ ಪ್ರಶ್ನೆ ಎಲ್ಲಿಂದ ಬಂತು? ಸಿ.ಎಂ. ಇಬ್ರಾಹಿಂ ಹೇಳಿಲ್ಲವೇ ಸೊಸೆ ಮನೆಗೆ ಬಂದ ಮೇಲೆ ಆಕೆ ಮನೆಯವಳೆ. ಅತ್ತೆ-ಸೊಸೆ ಇಬ್ಬರೂ ಒಂದೆ ಆಗುತ್ತಾರೆ. ಹೊರಗಿನಿಂದ ಬಂದವಳು ಎಂದು ಹೇಳಲಾಗದು ಎಂದು ಹೇಳಿದರು.
ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಚುನಾವಣೆ ಎದುರಿಸಿದ ಬಳಿಕ ಶಾಸಕರು, ಹೈಕಮಾಂಡ್ ನಿಂದ ಸಿಎಂ ಬಗ್ಗೆ ತೀರ್ಮಾನವಾಗುತ್ತೆ. ಇನ್ನು ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.