alex Certify ಮುಂದಿನ ʼಜೇಮ್ಸ್ ಬಾಂಡ್ʼ ಚಿತ್ರಕ್ಕೆ ಈ ಸ್ಥಳ ಪರಿಪೂರ್ಣ ಎಂದು ಆನಂದ್ ಮಹೀಂದ್ರಾ ಹೇಳಿದ್ದೇಕೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ʼಜೇಮ್ಸ್ ಬಾಂಡ್ʼ ಚಿತ್ರಕ್ಕೆ ಈ ಸ್ಥಳ ಪರಿಪೂರ್ಣ ಎಂದು ಆನಂದ್ ಮಹೀಂದ್ರಾ ಹೇಳಿದ್ದೇಕೆ ಗೊತ್ತಾ..?

ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಚೆನಾಬ್ ರೈಲ್ವೇ ಸೇತುವೆಯ ಫೋಟೋಗೆ ಮನಸೋಲದವರೇ ಇಲ್ಲ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಇದರಿಂದ ಹೊರತಾಗಿಲ್ಲ. ಚೆನಾಬ್ ಸೇತುವೆಯ ಫೋಟೋವನ್ನು ಮರುಟ್ವೀಟ್ ಮಾಡಿದ ಮಹೀಂದ್ರಾ, ಮುಂದಿನ ಜೇಮ್ಸ್ ಬಾಂಡ್ ಅವರ ಚಲನಚಿತ್ರದ ದೃಶ್ಯಕ್ಕೆ ಇದು ಪರಿಪೂರ್ಣ ಸ್ಥಳವಾಗಿದೆ ಎಂದು ಸಲಹೆ ನೀಡಿದ್ದಾರೆ.

ಜೇಮ್ಸ್ ಬಾಂಡ್ ಮುಂದಿನ ಚಲನಚಿತ್ರದ ದೃಶ್ಯಕ್ಕಾಗಿ ಚೆನಾಬ್ ರೈಲ್ವೇ ಸೇತುವೆ ಬಳಿ ಶೂಟಿಂಗ್ ಮಾಡಲು ಅದ್ಭುತ ಸ್ಥಳ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ನೆಟ್ಟಿಗರು ಕೂಡ ಆನಂದ್ ಮಹೀಂದ್ರಾ ಹೇಳಿಕೆಗೆ ಧ್ವನಿಗೂಡಿಸಿದ್ದು, ಸ್ವಿಸ್ ಆಲ್ಪ್ಸ್ ಬದಲಿಗೆ ರೋಪ್‌ವೇ ದೃಶ್ಯದಲ್ಲಿ ಗಿರ್ನಾರ್ ಕೇಬಲ್ ಕಾರ್ ಅನ್ನು ಸಹ ತೋರಿಸಬಹುದು ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಬಾಂಡ್ ಚಲನಚಿತ್ರದ ಬದಲಿಗೆ, ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರ ಮುಂದಿನ ಅಥವಾ ಯಾವುದೇ ಭಾರತೀಯ ಚಲನಚಿತ್ರದಲ್ಲಿ ಮೊದಲು ಚೆನಾಬ್ ಸೇತುವೆಯ ದೃಶ್ಯವನ್ನು ತೋರಿಸಬೇಕೆಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಹಾಲಿವುಡ್ ಅಥವಾ ಬಾಲಿವುಡ್‌ ಮೊದಲಿಗೆ ಮಹೀಂದ್ರಾ ಜಾಹೀರಾತಿನಲ್ಲಿ ಸೇತುವೆ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಇನ್ನು ಇಂಜಿನಿಯರಿಂಗ್ ಅದ್ಭುತದ ಬಗ್ಗೆ ಭಾರತೀಯ ಮಾಹಿತಿ ಸೇವೆಗಳ ಅಧಿಕಾರಿ ಅಂಕುರ್ ಲಾಹೋಟಿ ಸೇತುವೆಯ ಬಗ್ಗೆ ಕೆಲವು ಆಸಕ್ತಿದಾಯಕ ವಿವರಗಳನ್ನು ಹಂಚಿಕೊಂಡಿದ್ದಾರೆ. ನದಿಪಾತ್ರದ ಮಟ್ಟದಿಂದ 359 ಮೀಟರ್‌ಗಳಷ್ಟು ಎತ್ತರದಲ್ಲಿರುವ ಈ ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಮಾತ್ರವಲ್ಲದೆ, ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...