ನವದೆಹಲಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಆಹಾರ ಆರ್ಡರ್ ಮಾಡುವ ಅಪ್ಲಿಕೇಶನ್‌ಗಳು 10 ನಿಮಿಷಗಳಲ್ಲಿ ಸೇವೆ ಒದಗಿಸುವ ಘೋಷಣೆ ವಿಚಾರವಾಗಿ ಪ್ರಸ್ತಾಪಿಸುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
10 ನಿಮಿಷಗಳ ಆಹಾರ ಸೇವೆಯು ವಿತರಣಾ ಕಾರ್ಯನಿರ್ವಾಹಕರನ್ನು ಟ್ರಾಫಿಕ್ ನಿಯಮಗಳನ್ನು ಮುರಿಯುವಂತೆ ಮಾಡುತ್ತದೆ. ಅಲ್ಲದೆ ಇತರರ ಜೀವವನ್ನು ಅಪಾಯಕ್ಕೆ ತಳ್ಳುತ್ತದೆ. ಅಂತಹ ರೀತಿಯ ಆಹಾರ ಸೇವೆ ನಿಯಂತ್ರಣಕ್ಕೆ ಅವರು ಕರೆ ನೀಡಿದ್ದಾರೆ.
ಮಾರ್ಚ್‌ನಲ್ಲಿ, ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಝೊಮಾಟೊ, 10 ನಿಮಿಷದ ವಿತರಣಾ ಸೇವೆ ಒದಗಿಸುವುದಾಗಿ ಹೇಳಿ ಕೆಲವರಿಂದ ತೀವ್ರ ಟೀಕೆಗೆ ಒಳಗಾಯಿತು. ಇದು ವಿತರಣಾ ಪಾಲುದಾರರನ್ನು ಕಠಿಣ ಮತ್ತು ಅಸುರಕ್ಷಿತ ಕೆಲಸದ ವಾತಾವರಣಕ್ಕೆ ತಳ್ಳುತ್ತದೆ ಎಂದು ಹಲವರು ಹೇಳಿದ್ದಾರೆ.