alex Certify ಮುಂಗಾರಿನಲ್ಲಿ ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಗಾರಿನಲ್ಲಿ ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಹೀಗೆ ಮಾಡಿ

ಮಳೆಗಾಲದಲ್ಲಿ ಕೂದಲು ಉದುರುವುದು ಸರ್ವೇ ಸಾಮಾನ್ಯ. ಮಾನ್ಸೂನ್‌ನಲ್ಲಿ ಕೂದಲು ಉದುರುವುದಕ್ಕೆ ಅನೇಕ ಕಾರಣಗಳಿವೆ. ಕೂದಲು ಉದುರುವುದುರ ಜೊತೆಗೆ ಅತಿಯಾದ ಎಣ್ಣೆಯುಕ್ತ ನೆತ್ತಿ, ತಲೆಹೊಟ್ಟಿನಂತಹ ಸಮಸ್ಯೆಗಳನ್ನು  ಸಹ ಕೆಲವರು ಎದುರಿಸುತ್ತಾರೆ.

ಬೆಲೆಬಾಳುವ ಹೇರ್ ಮಾಸ್ಕ್‌, ಹೇರ್‌ ಆಯಿಲ್‌, ಶಾಂಪೂ ಬಳಸಿದ್ರೂ ಈ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಈ ಉತ್ಪನ್ನಗಳನ್ನು ಬಳಸುವುದಕ್ಕಿಂತ ಮುಖ್ಯವಾಗಿ ಕೂದಲು ಉದುರುವುದನ್ನು ತಡೆಯಲು ನೀವು ನಿಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಆರೋಗ್ಯಕರ ಕೂದಲಿಗೆ ಬೇಕಾದ ಉತ್ತಮ ಜೀವಸತ್ವ ಮತ್ತು ಖನಿಜಗಳುಳ್ಳ ಆಹಾರವನ್ನು ಸೇವಿಸಬೇಕು. ಆಗ ಮಾತ್ರ ಕೂದಲಿನ ಪೋಷಣೆ ಮಾಡಬಹುದು.

ಮೊಟ್ಟೆ: ಮೊಟ್ಟೆ ಸಂಪೂರ್ಣ ಆಹಾರ ಅನ್ನೋ ಮಾತೇ ಇದೆ. ಇದರಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಸಾಕಷ್ಟಿದೆ. ಮೊಟ್ಟೆ ಕೂದಲಿನ ಬೇರುಗಳನ್ನು ಪೋಷಿಸುತ್ತದೆ ಮತ್ತು ಬಲಪಡಿಸುತ್ತದೆ. ಕೂದಲಿನಲ್ಲಿ ಕಾಲಜನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ಮೊಟ್ಟೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಬೆಳಗಿನ ಉಪಹಾರಕ್ಕೆ ಮೊಟ್ಟೆ ತಿನ್ನುವುದು ಸೂಕ್ತ.

ಮೆಂತ್ಯ : ಮೆಂತ್ಯದ ಕಾಳುಗಳಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಕೂದಲು ಉದುರುವ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ರಾತ್ರಿಯಿಡೀ ಒಂದು ಬೌಲ್‌ನಲ್ಲಿ ಸ್ವಲ್ಪ ಮೆಂತ್ಯದ ಕಾಳನ್ನು ನೆನೆಸಿ ಇಡಿ. ಬೆಳಗ್ಗೆ ಅದನ್ನು ಸೋಸಿಕೊಂಡು, ಆ ನೀರನ್ನು ಕುಡಿಯಿರಿ. ಈ ರೀತಿ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಬಾದಾಮಿ ಮತ್ತು ವಾಲ್‌ನಟ್: ಒಮೆಗಾ-3 ಕೊಬ್ಬಿನಾಮ್ಲಗಳು ವಾಲ್‌ನಟ್ಸ್ ಮತ್ತು ಬಾದಾಮಿಗಳಲ್ಲಿ ಹೇರಳವಾಗಿವೆ. ಈ ಎರಡೂ ಸೂಪರ್‌ ಫುಡ್‌ಗಳು ಕೂದಲಿನ ತೇವಾಂಶವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿವೆ. ಪ್ರತಿದಿನ ನಾಲ್ಕಾರು ಬಾದಾಮಿ ಹಾಗೂ ವಾಲ್ನಟ್ಸ್‌ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ಫೋಲೇಟ್, ವಿಟಮಿನ್ ಹೇರಳವಾಗಿದೆ. ಕೂದಲಿನ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಪಾಲಕ್‌ ಸೊಪ್ಪಿನ ಮೇಲೋಗರ ಮಾಡಬಹುದು. ಅಥವಾ ಪಾಲಕ್‌ ಸ್ಮೂಥಿ, ಸಾಸ್‌ ಮತ್ತು ಸೂಪ್‌ ಮಾಡಿಕೊಂಡು ಕೂಡ ಸೇವನೆ ಮಾಡಬಹುದು.

ನೇರಳೆ ಹಣ್ಣು: ಮುಂಗಾರು ರುತುವಿನಲ್ಲಿ ನೇರಳೆ ಹಣ್ಣುಗಳು ಸಿಗುತ್ತವೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿರುತ್ತದೆ. ಇದು ಕಾಲಜನ್ ಅನ್ನು ಉತ್ಪಾದಿಸಲು ಮತ್ತು ನಿಮ್ಮ ನೆತ್ತಿಯ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನ ರಾಯತ ಮಾಡಬಹುದು, ಸ್ಮೂತಿ ಮಾಡಿಕೊಂಡು ಕುಡಿಯಬಹುದು. ಅಥವಾ ನೇರಳೆ ಹಣ್ಣುಗಳನ್ನೂ ಹಾಗೇ ತಿಂದರೂ ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...