ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಮುಗಿಲ್ ಪೇಟೆ ನೋಡಿದವರು ವಾವ್ ಎಂದಿರುತ್ತಿರಿ. ಈ ಮುಗಿಲ್ ಪೇಟೆಯ ಸೌಂದರ್ಯ ಮುಂಗಾರು ಮಳೆಗೆ ಹೆಚ್ಚಾಗಿದೆ.
ದಟ್ಟ ಹಸಿರಿನ ನಡುವೆ ಮಳೆ, ಮಂಜನ್ನು ಹೊದ್ದುಕೊಂಡಿರುವ ಬೆಟ್ಟಗಳ ಸಾಲು, ತಣ್ಣನೆಯ ಗಾಳಿ ನಿಮಗೆ ಸ್ವಿಜರ್ ಲ್ಯಾಂಡ್ ಅನುಭವವನ್ನು ತಂದು ಕೊಡುತ್ತದೆ.
ಮೊದಲೇ ಪ್ರವಾಸಿಗರ ಸ್ವರ್ಗವಾಗಿರುವ ಕಾಫಿನಾಡು ಮಡಿಕೇರಿಯಲ್ಲಿ ಮುಂಗಾರು ಪೂರ್ವ ಮಳೆಯಿಂದ ಕಾಫಿ ತೋಟಗಳು ನಳನಳಿಸುತ್ತಿವೆ. ಮುಂಗಾರು ಮಳೆ ಕೂಡ ಜೋರಾಗಿದ್ದು, ನಿಸರ್ಗದ ಚೆಲುವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಚಳಿ, ಮಳೆ, ಮಂಜು, ಗಾಳಿ, ಹಸಿರು ಬೆಟ್ಟಗಳ ಸಾಲು ಅಪರೂಪದ ದೃಶ್ಯ ವೈಭವ ಕಾಣಸಿಗುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ.
ಮುಗಿಲ್ ಪೇಟೆ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ ಮೊದಲೇ ಪ್ಲಾನ್ ಮಾಡಿಕೊಂಡು ಹೋದರೆ, ಅನುಕೂಲವಾಗುತ್ತದೆ.
ಪ್ರಕೃತಿಯ ದೃಶ್ಯ ವೈಭವನ್ನು ಕಣ್ತುಂಬಿಕೊಳ್ಳಲು ನೀವೂ ರೆಡಿಯಾಗಿ. ಹಸಿರ ಸಿರಿಯಲ್ಲಿ ವಿಹರಿಸಿ ಮಳೆಗಾಲದ ಸುಮಧುರ ಅನುಭವವನ್ನು ಪಡೆದುಕೊಳ್ಳಿ.