ನೀವು ಎಂದಾದ್ರೂ ನದಿಯಲ್ಲೋ ಅಥವಾ ತೊರೆಯಲ್ಲೋ ಮೀನಿಗೆ ಗಾಳ ಹಾಕಿದ್ದರೆ, ಗಾಳಕ್ಕೆ ಮೀನು ಸಿಕ್ಕಿದೆ ಎಂದು ಎಳೆದಾಗ ಹಾವು ಅಥವಾ ಬೇರೆ ಜೀವಿ ಗಾಳದಲ್ಲಿ ಸಿಕ್ಕಿಬಿದ್ದಿದ್ದರೆ ಹೌಹಾರಿರುತ್ತೀರಿ. ಹಾಗೆಯೇ ಮೀನುಗಾರಿಕೆಗೆ ಹೋದವರಿಗೂ ತಾವು ಹಾಕಿರೋ ಬಲೆಯಲ್ಲಿ ಭಾರಿ ಪ್ರಮಾಣದ ಮೀನು ಸಿಕ್ಕಿದೆ ಎಂದು ಕಷ್ಟಪಟ್ಟು ಹಿಡಿದು ಎಳೆದಾಗ, ಬೇರಾವುದು ವಸ್ತು ಸಿಕ್ಕಿಹಾಕಿಕೊಂಡು ಪೇಚಿಗೆ ಸಿಲುಕಿರುವಂತ ಅನೇಕ ನಿದರ್ಶನಗಳು ನಡೆದಿವೆ.
ಆದರೆ, ಬೇ ಆಫ್ ಪ್ಲೆಂಟಿಯ ದಡದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆ ಮಾಡುತ್ತಿದ್ದ ನ್ಯೂಜಿಲೆಂಡ್‌ನ ವ್ಯಕ್ತಿ ಮಾತ್ರ ಶಾಕ್ ಆಗಿದ್ದಾರೆ. ಯಾಕೆಂದರೆ ಅವರು ಮೀನುಗಳನ್ನು ಹಿಡಿಯಲು ಶ್ರಮ ವಹಿಸುತ್ತಿದ್ರೆ ಅವರಿಗೆ ಸಿಕ್ಕಿದ್ದು ದೊಡ್ಡ ಬಿಳಿ ಶಾರ್ಕ್..! ಅದು ನೀರಿನಿಂದ ಜಿಗಿದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಶಾರ್ಕ್ ವಯಸ್ಕರ ಗಾತ್ರದ ಮೂರನೇ ಒಂದು ಭಾಗದಷ್ಟಿದ್ದರೂ ಸಹ, ಮೀನುಗಾರಿಕಾ ಬಲೆಯನ್ನು ಮುರಿಯುವಷ್ಟು ಪ್ರಬಲವಾಗಿದೆ.
ಗ್ರೇ ಅವರು ಈ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವಾಗ ಹ್ಯಾಮರ್‌ಹೆಡ್ ಮತ್ತು ತಿಮಿಂಗಿಲಗಳನ್ನು ಮಾತ್ರ ನೋಡಿದ್ದಾರಂತೆ. ಆದರೆ, ಇಷ್ಟು ದೊಡ್ಡ ಗಾತ್ರದ ಬಿಳಿ ಶಾರ್ಕ್ ಅನ್ನು ಅವರೆಂದೂ ಕೂಡ ನೋಡಿಲ್ವಂತೆ.
ಘಟನೆಯ ನಂತರ ನ್ಯೂಜಿಲೆಂಡ್ ಸಂರಕ್ಷಣಾ ಇಲಾಖೆಯ ಸಮುದ್ರ ತಜ್ಞರು, ಈಜುಗಾರರು ಮತ್ತು ಸರ್ಫರ್‌ಗಳು ಜಾಗರೂಕರಾಗಿರಬೇಕು ಮತ್ತು ಸಮುದ್ರದಲ್ಲಿ ಒಬ್ಬಂಟಿಯಾಗಿರಬಾರದು ಎಂದು ತಿಳಿಸಿದೆ.