ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರ ಕರ್ನಾಟಕಕ್ಕೆ ಆಗಮಿಸಿದ್ದಾರೆ.
ಗುರುವಾರದಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಉಚ್ಚಿಲದ ದೇವಸ್ಥಾನದ ಆವರಣದಲ್ಲಿ ಮೀನುಗಾರರ ಸಂವಾದ ನಡೆಸಿದ್ದು, ಬಳಿಕ ಅವರಿಗೆ ಕಟಪಾಡಿ ನಿವಾಸಿ ಪ್ರೇಮಾ ಎಂಬವರು ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದ್ದರು.
ಇದನ್ನು ಖುಷಿಯಿಂದ ಸ್ವೀಕರಿಸಿದ ರಾಹುಲ್, ನಾನು ಮೀನನ್ನು ಮುಟ್ಟಿದ್ದೇನೆ. ಹಾಗಾಗಿ ದೇವಸ್ಥಾನದ ಒಳಗೆ ಬರುವುದಿಲ್ಲ ಎಂದು ಹೇಳಿದ್ದು, ಬಳಿಕ ಮಂಗಳೂರಿನ ಸರ್ಕ್ಯೂಟ್ ಹೌಸ್ ಪಕ್ಕದ ಹೋಟೆಲ್ ಒಂದರಲ್ಲಿ ಮಾಂಜಿ, ಏಡಿ ಖಾದ್ಯಗಳೊಂದಿಗೆ ನೀರು ದೋಸೆ ಸವಿದಿದ್ದಾರೆ.