ವಾಸ್ತು ಶಾಸ್ತ್ರದಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಮೆಚ್ಚಿಸುವ ಅನೇಕ ಮಾರ್ಗಗಳಿವೆ. ಇವುಗಳನ್ನು ಚಾಚೂ ತಪ್ಪದೇ ಮಾಡುವುದರಿಂದ ಹಣವಂತರಾಗಬಹುದು ಎಂಬ ನಂಬಿಕೆಯಿದೆ. ಕೆಲವು ಪರಿಹಾರಗಳು ತುಂಬಾ ಸರಳ ಆದರೆ ಪರಿಣಾಮಕಾರಿ. ಈ ಕ್ರಮಗಳನ್ನು ಅನುಸರಿಸುವುದರಿಂದ, ಮನೆಯಲ್ಲಿ ಸಂಪತ್ತು ವೇಗವಾಗಿ ಹೆಚ್ಚಾಗುತ್ತದೆ.
ಪ್ರತಿಯೊಂದು ದಿಕ್ಕನ್ನೂ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ವಿವರಿಸಲಾಗಿದೆ. ಯಾವ ಕೆಲಸಕ್ಕೆ ಯಾವ ದಿಕ್ಕು ಸೂಕ್ತ ಎಂಬುದನ್ನು ಹೇಳಲಾಗಿದೆ. ಅದೇ ರೀತಿ ಮನೆಯೊಳಗೆ ವಿವಿಧ ವಸ್ತುಗಳನ್ನು ಇಡಬೇಕು. ಈ ನಿಯಮಗಳನ್ನು ಅನುಸರಿಸಿದರೆ ದೇವಾನುದೇವತೆಗಳು ಆಶೀರ್ವಾದ ನೀಡುತ್ತಾರೆ.
ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾಳೆ ಲಕ್ಷ್ಮಿದೇವಿ!
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯು ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾಳೆ. ನೀವು ಶ್ರೀಮಂತರಾಗಲು ಬಯಸಿದರೆ ಮನೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಸ್ಥಾಪಿಸಿ. ಇದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ವಾಸ್ತು ಪ್ರಕಾರ ಲಕ್ಷ್ಮಿಯ ವಿಗ್ರಹವನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಕಾರ್ತಿಕ ಮಾಸದಲ್ಲಿಯೇ ಈ ಕಾರ್ಯ ಮಾಡುವುದು ಶ್ರೇಷ್ಠ.
ಪ್ರತಿದಿನ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಈ ಪರಿಹಾರವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಸದಾ ಸ್ವಚ್ಛತೆ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಅಡುಗೆ ಕೋಣೆಯನ್ನು ಸ್ವಚ್ಛಮಾಡಿ. ಪಾತ್ರೆಗಳನ್ನು ತೊಳೆದಿಡಿ. ಆಗ ಮಾತ್ರ ನಿಮ್ಮ ಪೂಜೆ ಫಲಿಸುತ್ತದೆ.