ಅತಿಯಾದ್ರೆ ಅಮೃತವೂ ವಿಷ ಎನ್ನುವ ಮಾತಿದೆ. ಬೇಸಿಗೆಯಲ್ಲಿ ಎಲ್ಲರು ಇಷ್ಟ ಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ.
ಸಿಹಿ ಸಿಹಿ ಕಲ್ಲಂಗಡಿ ಹಣ್ಣು ಎಲ್ಲರಿಗೂ ಪ್ರಿಯ. ಬಾಯಿಗೆ ರುಚಿಯಾಗಿರುವ ಹಾಗೂ ಸಾಕಷ್ಟು ನೀರಿನಂಶವಿರುವ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಅತಿಯಾಗಿ ಕಲ್ಲಂಗಡಿ ಹಣ್ಣು ಸೇವನೆ ಮಾಡುವುದು ಒಳ್ಳೆಯದಲ್ಲ.
100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ 6 ಗ್ರಾಂ ಸಕ್ಕರೆಯಿರುತ್ತದೆ. ಸಾಮಾನ್ಯವಾಗಿ ಎಲ್ಲ ಆಹಾರ ಸೇರಿ ಪ್ರತಿ ದಿನ 100 ರಿಂದ 150 ಗ್ರಾಂ ಸಕ್ಕರೆ ಸೇವನೆ ಒಳ್ಳೆಯದು.
ಇದು ಜಾಸ್ತಿಯಾದ್ರೆ ಅನಾರೋಗ್ಯ ಕಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಜೊತೆ ಫೈಬರ್ ಇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಅಜೀರ್ಣ ಸಮಸ್ಯೆ ಕಾಡುತ್ತದೆ. ಅತಿಸಾರ, ವಾಂತಿ, ಗ್ಯಾಸ್ ಸಮಸ್ಯೆ ಕಾಡುವುದುಂಟು.
ಕಲ್ಲಂಗಡಿ ಹಣ್ಣಿನಲ್ಲಿರುವ ಸಕ್ಕರೆ ಕೂಡ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ಮಧುಮೇಹ ರೋಗಿಗಳಾಗಿದ್ದರೆ ಹೆಚ್ಚು ಕಲ್ಲಂಗಡಿ ಹಣ್ಣಿನ ಸೇವನೆ ಬೇಡ. ಮಿತಿಗಿಂತ ಹೆಚ್ಚು ಕಲ್ಲಂಗಡಿ ಹಣ್ಣನ್ನು ತಿಂದ್ರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ.