ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಿಸೆಂಬರ್ 10 ರ ಶನಿವಾರದಂದು ವೈಟ್ ಫೀಲ್ಡ್ ನ ಕೆ ಟಿ ಪಿ ಓದಲ್ಲಿ ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದ್ದು, ದೇಶದ ಅತ್ಯಂತ ಹಳೆಯ ಹಾಗೂ ಏಕೈಕ ಮಧ್ಯರಾತ್ರಿ ಮ್ಯಾರಥಾನ್ ಇದಾಗಿದೆ.
ಮಿಡ್ ನೈಟ್ ಮ್ಯಾರಥಾನ್ ನ 15 ನೇ ಆವೃತ್ತಿಗೆ ನೋಂದಣಿ ಕಾರ್ಯ ಅಕ್ಟೋಬರ್ 6ರಿಂದ ಆರಂಭವಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರಿಗೆ ಮಾಹಿತಿ ಇಲ್ಲಿದೆ.
ದೇಶ – ವಿದೇಶಗಳ ವೃತ್ತಿಪರ ಓಟಗಾರರು, ಆಸಕ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ನಿಮಗೂ ಭಾಗವಹಿಸಲು ಇಚ್ಛೆ ಇದ್ದರೆ www.midnightmarathon.com ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.