ಬೆಂಗಳೂರು: ಮಾಸ್ಕ್ ಸರಿಯಾಗಿ ಹಾಕಿಲ್ಲ ಎಂಬ ಕಾರಣಕ್ಕೆ ಮಹಿಳೆಯೋರ್ವರು ವಾಕಿಂಗ್ ಗೆ ಬಂದ ಮತ್ತೋರ್ವ ಮಹಿಳೆಯನ್ನು ದೊಣ್ಣೆಯಿಂದ ಹೊಡೆದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ಬೆಳಕಿಗೆ ಬಂದಿದೆ.
ಪಾರ್ಕ್ ಗೆ ವಾಕಿಂಗ್ ಬಂದ ಓರ್ವ ಮಹಿಳೆ ಮಾಸ್ಕನ್ನು ಸರಿಯಾಗಿ ಮೂಗಿನ ಮೇಲಿಂದ ಧರಿಸಿರಲಿಲ್ಲ. ಇದೇ ವೇಳೆ ನಾಯಿಜೊತೆ ದೊಣ್ಣೆ ಹಿಡಿದು ವಾಕಿಂಗ್ ಬಂದ ಮತ್ತೋರ್ವ ಮಹಿಳೆ ಮಾಸ್ಕ್ ಸರಿಯಾಗಿ ಹಾಕಿಲ್ಲ ಎಂದು ರೊಚ್ಚಿಗೆದ್ದು ತನ್ನ ಕೈಲಿದ್ದ ದೊಣ್ಣೆಯಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಳೆ. ಮಾಸ್ಕ್ ಬಗ್ಗೆ ಪ್ರಶ್ನಿಸಿ, ಕ್ರಮ ಕೈಗೊಳ್ಳಲು ಪೊಲೀಸರು ಇದ್ದಾರೆ. ಆದರೆ ದೊಣ್ಣೆಯಿಂದ ಹಲ್ಲೆ ನಡೆಸಲು ನೀನ್ಯಾರು ಎಂದು ಏಟು ತಿಂದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇಬ್ಬರ ನಡುವೆ ವಾಗ್ವಾದ ಜೋರಾಗುತ್ತಿದ್ದಂತೆ ಸ್ಥಳೀಯರು ಹಲ್ಲೆ ನಡೆಸಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಸದಾಶಿವ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.