![](https://kannadadunia.com/wp-content/uploads/2022/05/Untitled-design-101.jpg)
ಆತ್ಮೀಯ ಗ್ರಾಹಕರೇ, 2022ರ ಮೇ 16ರಿಂದ ಮಾವು ಪೋರ್ಟಲ್ ತೆರೆಯಲು ನಾವು ಸಂತಸ ವ್ಯಕ್ತಪಡಿಸುತ್ತಿದ್ದೇವೆ. ಈ ವರ್ಷ ಮಾವಿನ ಸೀಸನ್ ಒಂದು ತಿಂಗಳು ವಿಳಂಬವಾಗಿದೆ. ಆದರೆ ಈ ಮಾವುಗಳ ಪೋರ್ಟಲ್ ಆಗಸ್ಟ್ ತಿಂಗಳವರೆಗೂ ಮುಂದುವರಿಯಲಿದೆ ಎಂದು ಪೋರ್ಟಲ್ನಲ್ಲಿ ಶೀರ್ಷಿಕೆ ನೀಡಲಾಗಿದೆ.
ವೆಬ್ಸೈಟ್ ಇಂಡಿಯಾ ಪೋಸ್ಟ್ ಸಹಯೋಗದೊಂದಿಗೆ ಈ ವೆಬ್ಸೈಟ್ ಆರಂಭಿಸಲಾಗಿದೆ. ಈ ಪೋರ್ಟಲ್ ಸಹಾಯದಿಂದ ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸಲಾಗುತ್ತಿದೆ.
ಪೋರ್ಟಲ್ನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಇಡಲಾಗಿದೆ. ಅಲ್ಫಾನ್ಸೋ, ಬಾದಾಮಿ, ಅಪೂಸ್, ರಸ್ಪುರಿ, ಮಲ್ಲಿಕಾ, ಹಿಮಾಮ್ ಪಸಂದ್ ಹಾಗೂ ಕೇಸರ್ ಸೇರಿದಂತೆ ವಿವಿಧ ಹಣ್ಣುಗಳು ಲಭ್ಯವಿದೆ.
ಕೆಎಸ್ಎಂಡಿಎಂಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಈ ವಿಚಾರವಾಗಿ ಮಾತನಾಡಿದ್ದು, ಕಳೆದ 2 ವರ್ಷಗಳಿಂದ ರೈತರು ಹಾಗೂ ಗ್ರಾಹಕರು ಈ ಯೋಜನೆಯಿಂದ ಲಾಭ ಪಡೆದಿದ್ದಾರೆ. ಇಂತಹ ಉಪಕ್ರಮವನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2020 ರಿಂದಲೂ ಈ ಪೋರ್ಟಲ್ ಲಭ್ಯವಿದೆ ಎಂದಿದ್ದಾರೆ.