ಹಣ್ಣುಗಳ ರಾಜ ಮಾವು. ಬೇಸಿಗೆ ಮಾವಿನ ಹಣ್ಣಿನ ಋತು. ಬಹುತೇಕ ಎಲ್ಲರೂ ಮಾವಿನ ಹಣ್ಣನ್ನು ಇಷ್ಟಪಡ್ತಾರೆ. ಮಾವಿನ ಹಣ್ಣು ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಮಾವಿನ ಹಣ್ಣು ಸೇವಿಸಿದ ನಂತ್ರ ಕೆಲ ಆಹಾರ ಸೇವನೆ ಮಾಡಬಾರದು. ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಮಾವಿನಹಣ್ಣು ತಿಂದ ಕೂಡಲೇ ನೀರು ಕುಡಿಯಬಾರದು. ಮಾವಿನ ಹಣ್ಣು ತಿಂದ ಕೂಡಲೇ ನೀರು ಕುಡಿಯುವುದರಿಂದ ಹೊಟ್ಟೆ ನೋವು, ಅನಿಲ ಸಮಸ್ಯೆ ಕಾಡುತ್ತದೆ. ಕರುಳಿನಲ್ಲಿ ಸೋಂಕಿನ ಅಪಾಯವೂ ಇರುತ್ತದೆ. ಮಾವಿನಹಣ್ಣು ತಿಂದ ಅರ್ಧ ಅಥವಾ ಒಂದು ಗಂಟೆಯ ನಂತರ ನೀರನ್ನು ಕುಡಿಯಬಹುದು.
ಮಾವಿನ ಹಣ್ಣು ತಿಂದ ಕೂಡಲೇ ತಂಪು ಪಾನೀಯ ಕುಡಿಯಬಾರದು. ಮಾವಿನಹಣ್ಣಿನಲ್ಲಿ ಸಾಕಷ್ಟು ಸಕ್ಕರೆ ಅಂಶವಿರುತ್ತದೆ. ತಂಪು ಪಾನೀಯಗಳಲ್ಲಿ ಸಾಕಷ್ಟು ಸಕ್ಕರೆ ಇರುತ್ತದೆ. ಮಧುಮೇಹದ ವ್ಯಕ್ತಿ ಮಾವಿನ ಹಣ್ಣಿನ ನಂತ್ರ ತಂಪು ಪಾನೀಯ ಸೇವನೆ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಮಾವು ತಿಂದ ಕೂಡಲೇ ಮೊಸರನ್ನು ತಿನ್ನಬಾರದು. ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಉಂಟಾಗಿ ಅನೇಕ ಸಮಸ್ಯೆ ಕಾಡುತ್ತದೆ.
ಮಾವಿನ ನಂತರ ಸೋರೆಕಾಯಿ ಸೇವಿಸುವುದೂ ಸರಿಯಲ್ಲ. ವಾಕರಿಕೆ, ವಾಂತಿ ಮತ್ತು ಉಸಿರಾಟದ ತೊಂದರೆಯುಂಟು ಮಾಡುತ್ತದೆ.
ಮಾವಿನ ಹಣ್ಣು ಸೇವನೆ ನಂತ್ರ ಮಸಾಲೆ ಅಡುಗೆ ಸೇವಿಸಬಾರದು. ಹೊಟ್ಟೆ ಮತ್ತು ಚರ್ಮದ ಕಾಯಿಲೆ ಕಾಡುತ್ತದೆ.