
ರಾಶಿ ರಾಶಿ ಮಾವಿನಹಣ್ಣಿನ ಮಧ್ಯೆ ಗಿಳಿಯೊಂದು ಅಡಗಿ ಕುಳಿತಿದೆ. ಇದನ್ನು ಹುಡುಕುವಂತೆ ನೆಟ್ಟಿಗರಲ್ಲಿ ಸವಾಲು ಹಾಕಲಾಗಿದೆ. ಅನೇಕ ನೆಟ್ಟಿಗರಿಗೆ ಹಣ್ಣಿನಲ್ಲಿ ಅಡಗಿರುವ ಹಕ್ಕಿಯನ್ನು ಹುಡುಕಲಾಗಲಿಲ್ಲ. ಅವರು ದೀರ್ಘಕಾಲದವರೆಗೆ ತಮ್ಮ ಪರದೆಯತ್ತ ನೋಡುತ್ತಿದ್ದುದಾಗಿ ಹೇಳಿದ್ದಾರೆ.
ವೈರಲ್ ಆಗುತ್ತಿರುವ ಈ ಆಪ್ಟಿಕಲ್ ಇಲ್ಯೂಷನ್ ಕೆಂಪು ಮತ್ತು ಹಸಿರು ಬಣ್ಣದ ಮಾವಿನ ಹಣ್ಣಿನ ದೊಡ್ಡ ರಾಶಿಯನ್ನು ತೋರಿಸುತ್ತದೆ. ಮಾವಿನ ಹಣ್ಣುಗಳ ಮಧ್ಯದಲ್ಲಿ ಗಿಳಿ ಒಂದೇ ಬಣ್ಣದಲ್ಲಿದ್ದು ಮರೆಮಾಚಿದೆ. ಎಲ್ಲಾ ಮಾವಿನ ಹಣ್ಣುಗಳ ಮೇಲೆ ಕಪ್ಪು ಚುಕ್ಕೆ ಇರುವುದರಿಂದ ಗಿಳಿಯ ಕಣ್ಣು ಕೂಡ ಮರೆಯಾಗಿದೆ. ಮಾವಿನಹಣ್ಣುಗಳ ನಡುವೆ ಅಡಗಿಕೊಳ್ಳಲು ಹಕ್ಕಿ ನಿಜವಾಗಿಯೂ ಪರಿಪೂರ್ಣ ಹೊಂದಾಣಿಕೆ ಮತ್ತು ಗಾತ್ರವನ್ನು ಹೊಂದಿದೆ.
ಒಂದು ವೇಳೆ ಚಿತ್ರದಲ್ಲಿ ಗಿಣಿಯನ್ನು ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ, ಕೆಳಗಿನ ಚಿತ್ರವು ಒಗಟಿಗೆ ಉತ್ತರವನ್ನು ಬಹಿರಂಗಪಡಿಸುತ್ತದೆ. ಫೋಟೋದ ಮೇಲಿನ ಎಡ ಮೂಲೆಯಲ್ಲಿ ಗಿಳಿ ಕುಳಿತಿರುವುದನ್ನು ನೀವು ನೋಡಬಹುದು.