ಕಳೆದು ಹೋದ ವಸ್ತು ಸಿಕ್ಕರೆ ಹೊಸ ವಸ್ತು ಖರೀದಿಸಿದ್ದಕ್ಕಿಂತ ಹೆಚ್ಚು ಖಷಿಯಾಗುತ್ತದೆ. ಅದ್ರಲ್ಲು ಪರ್ಸ್ ಕಳೆದು ಹೋಗಿ ಅದು ವಾಪಸ್ಸು ಸಿಕ್ಕರೆ ಆಗುವ ಖುಷಿಗೆ ಪಾರವೇ ಇರುವುದಿಲ್ಲ. ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರ್ಸ್ ಕಳೆದುಕೊಂಡಿದ್ದ ರವಿ ಎಂಬ ವ್ಯಕ್ತಿಗೆ ಪೊಲೀಸರು ಯಾವ ಕಂಪ್ಲೆಂಟ್ ನೀಡದಿದ್ದರು ಪರ್ಸ್ ಹುಡುಕಿಕೊಟ್ಟಿದ್ದಾರೆ.
ಹೌದು, ಏಕೆಂದರೆ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಇವರ ಕಳೆದು ಹೋದ ಪರ್ಸ್ ಸಿಕ್ಕಿತ್ತು. ಪರ್ಸ್ ನೋಡಿದ ಪೊಲೀಸರು ಅದರಲ್ಲಿದ್ದ ಗುರುತಿನ ಚೀಟಿಗಳ ಮೂಲಕ, ಅದರ ಮೂಲ ಮಾಲೀಕ ರವಿ ಎಂಬುವವರನ್ನ ಪತ್ತೆಹಚ್ಚಿ, ಹಿಂದಿರುಗಿಸಿದ್ದಾರೆ. ಕೆ.ಜಿ.ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮಾದಪ್ಪ ಹಾಗೂ ಯಲ್ಲಾಲಿಂಗರವರ ಈ ಕಾರ್ಯಕ್ಕೆ ಡಿಪಾರ್ಟ್ಮೆಂಟ್ ಹಾಗೂ ರವಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ ನೋಡುವುದಾದ್ರೆ, ರವಿ ಅವರು ಬನಶಂಕರಿ ಮಾರ್ಗದಲ್ಲಿ ಹೋಗುವಾಗ ಪರ್ಸ್ ಕಳೆದುಕೊಂಡಿದ್ದಾರೆ. ಈ ವೇಳೆ ಬೀಟ್ ನಲ್ಲಿದ್ದ ಕಾನ್ಸ್ಟೇಬಲ್ ಮಾದಪ್ಪ ಹಾಗೂ ಯಲ್ಲಾಲಿಂಗ ಅವ್ರಿಗೆ ಈ ಪರ್ಸ್ ದೊರಕಿದೆ. ಯಾರದು ಎಂದು ಡಿಟೇಲ್ಸ್ ನೋಡಲು ಪರ್ಸ್ ತೆಗೆದಿದ್ದಾರೆ. ಅದರಲ್ಲಿ ಮಾಲೀಕರ ಗುರುತಿನ ಚೀಟಿಯೊಂದಿಗೆ, 45ಸಾವಿರ ರೂ. ದುಡ್ಡು ಇತ್ತು. ಬೇರೆನೊ ಯೋಚಿಸದ ಇಬ್ಬರು ಪರ್ಸ್ ಮಾಲೀಕ ರವಿಯವರಿಗೆ ಕರೆ ಮಾಡಿ ಠಾಣೆಗೆ ಬರಹೇಳಿ ಪರ್ಸ್ ಹಿಂದಿರುಗಿಸಿದ್ದಾರೆ. ನನ್ನ ಮಗಳ ಶಾಲೆ ಶುಲ್ಕ ಕಟ್ಟಲೆಂದು 45ಸಾವಿರ ಸಾಲ ಪಡೆದಿದ್ದೆ ಎಂದಿರುವ ಪರ್ಸ್ ಮಾಲೀಕ ರವಿ ಪೊಲೀಸರ ಕಾರ್ಯಕ್ಕೆ ಧನ್ಯವಾದ ವ್ಯಕ್ತಪಡಿಸಿದ್ದಾರೆ.