ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಯೇ ಅಕ್ರಮ ನಡೆದಿದೆ. ಅರ್ಹತೆ ಇಲ್ಲದವರಿಗೆ ನಿಯಮ ಉಲ್ಲಂಘನೆ ಮಾಡಿ ಉನ್ನತ ಹುದ್ದೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಐಟಿ ವ್ಯವಸ್ಥಾಪಕರಾಗಿದ್ದ ಸೂರಿ ಪಾಯಿಲ್ ಎಂಬುವವರಿಗೆ ಈಗ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸದಸ್ಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಹೆಚ್.ಸಿ. ಗಿರೀಶ್ ವರ್ಗಾವಣೆ ಬಳಿಕ ಆ ಹುದ್ದೆಯನ್ನು ಸೂರಿ ಪಾಯಿಲ್ ಗೆ ನೀಡಲಾಗಿದೆ. ಅರ್ಹತೆ ಇಲ್ಲದವರಿಗೆ ಸದಸ್ಯ ಕಾರ್ಯದರ್ಶಿ ಹುದ್ದೆ ನೀಡಲಾಗಿರುವುದು ಸರಿಯಲ್ಲ. ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಅಧಿಕಾರದಲ್ಲಿಯೂ ಆತ ಮೂಗುತೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಸೂರಿ ಪಾಯಿಲ್ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡುವಂತೆಯೂ ತಿಳಿಸಿದ್ದಾರೆ.