alex Certify ಮಾಲಕಿ ಜೊತೆ ಯೋಗ ಮಾಡಿದ ಶ್ವಾನ: ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲಕಿ ಜೊತೆ ಯೋಗ ಮಾಡಿದ ಶ್ವಾನ: ಮುದ್ದಾದ ವಿಡಿಯೋ ವೈರಲ್

ಶ್ವಾನವೊಂದರ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದ್ರೆ ನಿಮ್ಮ ಮನ ಕರಗದೆ ಇರಲಾರದು. ಮಾಲಕಿ ಜೊತೆ ಸೇರಿ ನಾಯಿ ಕೂಡ ಯೋಗ ಮಾಡಿದ್ದು, ಕ್ಯೂಟ್ ವಿಡಿಯೋ ಖಂಡಿತಾ ನಿಮ್ಮ ಮನಗೆಲ್ಲುತ್ತದೆ.

ಮ್ಯಾಗ್ನಸ್ ಎಂಬ ನಾಯಿಯು ತನ್ನ ಮಾಲಕಿ ಜೊತೆ ಮುದ್ದುಮುದ್ದಾಗಿ ಯೋಗ ಸೆಷನ್‌ನಲ್ಲಿ ಪಾಲ್ಗೊಂಡಿದೆ. ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಮ್ಯಾಗ್ನಸ್, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಅಂದ್ರೆ ಅತಿಶಯೋಕ್ತಿಯಾಗುವುದಿಲ್ಲ. ಮ್ಯಾಗ್ನಸ್‌ಗೆ ಮೀಸಲಾಗಿರುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ತನ್ನ ಮಾಲಕಿಯು ಯಾವ ರೀತಿಯೆಲ್ಲಾ ಯೋಗ ಮಾಡುತ್ತಾಳೋ ಅದೇ ರೀತಿ ಶ್ವಾನ ಕೂಡ ಮಾಡಿದೆ. ತನ್ನ ಚಾಪೆಯನ್ನು ಉರುಳಿಸುವುದರಿಂದ ಹಿಡಿದು ಎಲ್ಲಾ ತಾಲೀಮುಗಳನ್ನು ಕೂಡ ತಪ್ಪದೇ ಪಾಲಿಸಿದೆ.  ಸದ್ಯ, ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಪ್ರೀತಿ ಹಾಗೂ ಹೃದಯದ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.

https://www.youtube.com/watch?v=UXzOKyjZiog&feature=youtu.be

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...