ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಏನು? ಅವರು ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ.
ಒಂದೊಂದು ತಿಂಗಳಿನಲ್ಲಿ ಹುಟ್ಟಿದವರು ಒಂದೊಂದು ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ. ಹಾಗಾದ್ರೆ ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರ ವಿಶೇಷತೆ ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಇದನ್ನು ಓದಿ.
* ಇವರು ಯಾವುದನ್ನಾದರೂ ಗಮನವಿಟ್ಟು ನೋಡುತ್ತಾರೆ. ಇವರನ್ನು ಯಾರೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ತುಂಬಾ ಎಚ್ಚರಿಕೆಯಿಂದ ಒಂದೊಂದು ಹೆಜ್ಜೆಯನ್ನಿಡುತ್ತಾರೆ. ಶತ್ರುಗಳನ್ನು ಕ್ಷಮಿಸಿ ಬಿಡುವ ಗುಣ ಇವರಲ್ಲಿದೆ.
*ಇವರು ಎಷ್ಟು ಭಾವ ಜೀವಿಗಳೋ ಅಷ್ಟೇ ತುಂಟ ಪ್ರವೃತ್ತಿಯವರು ಹೌದು. ತಮ್ಮ ಸುತ್ತಮುತ್ತಲಿರುವವರನ್ನು ನಗಿಸುವ ಗುಣ ಹೊಂದಿರುತ್ತಾರೆ.
*ಇನ್ನು ಇವರಿಗೆ ಅನುಕಂಪ ಜಾಸ್ತಿ. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಜಾಸ್ತಿ. ಈ ಕಾರಣದಿಂದ ಈ ತಿಂಗಳಿನಲ್ಲಿ ಹುಟ್ಟಿದವರು ಬೇಗ ಗೌರವಕ್ಕೆ ಪಾತ್ರರಾಗುತ್ತಾರೆ.
* ಇವರು ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳುವಾಗ ತುಂಬಾ ಎಚ್ಚರಿಕೆ ವಹಿಸುತ್ತಾರೆ. ತಮ್ಮ ನಿರ್ಧಾರದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಇವರು ಮೋಸ ಮಾಡುವ ಪ್ರವೃತ್ತಿಯವರು ಅಲ್ಲ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಇವರು ಸಂಗಾತಿಯ ಕೈ ಬಿಡುವುದಿಲ್ಲ.
*ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರು ಪ್ರಕೃತಿ ಪ್ರೇಮಿಗಳು. ಪ್ರಾಣಿ ಪಕ್ಷಿಗಳು ಎಂದರೆ ಇವರಿಗೆ ತುಂಬಾ ಪ್ರೀತಿ.
* ಎಲ್ಲರ ಜತೆ ಬೆರೆತರೂ ಇವರಿಗೆ ಹೆಚ್ಚು ಜನಜಂಗುಣಿ ಎಂದರೆ ಅಷ್ಟಕಷ್ಟೇ. ಮೌನವನ್ನು ಹೆಚ್ಚು ಇಷ್ಟಪಡುತ್ತಾರೆ. ಜೀವನದಲ್ಲಿ ಏನೇ ಬಂದರೂ ಅದನ್ನು ಒಪ್ಪಿಕೊಂಡು ನಡೆಯುವ ಪ್ರವೃತ್ತಿಯವರು.