ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಮಾರ್ಚ್ 16ರಂದು ಖಟ್ಕರ್ ಕಲಾನ್ನಲ್ಲಿ ಪಂಜಾಬ್ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪಂಜಾಬ್ನ ಸಿಎಂ ಅಭ್ಯರ್ಥಿ ಭಗವಂತ್ ಮಾನ್, ಇಂದು ನಾನು ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಮಾರ್ಚ್ 16ರ ಮಧ್ಯಾಹ್ನ 12:30ಕ್ಕೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇನೆ. ನಾನು ಖಟ್ಕರ್ ಕಲಾನ್ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನಾವು ಮತ್ತೆ ಮೊದಲಿನ ಪಂಜಾಬ್ನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ.
ಖಟ್ಕರ್ ಕಲಾನ್ನಲ್ಲಿರುವ ಶಹೀದ್ ಭಗತ್ ಸಿಂಗ್ರ ಮನೆಯಲ್ಲಿ ನಾವು ಸಮಾರಂಭವನ್ನು ಆಯೋಜಿಸಲಿದ್ದೇವೆ. ರಾಜ್ಯದೆಲ್ಲೆಡೆಯಿಂದ ಪಂಜಾಬಿಗಳು ಆಗಮಿಸಲಿದ್ದಾರೆ ಎಂದು ಮಾನ್ ಹೇಳಿದರು.
ಇತ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಗೋವಾದ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ರೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಗೋವಾದಲ್ಲೂ ಕೂಡ ಸರ್ಕಾರವನ್ನು ರಚಿಸಲು ಬಿಜೆಪಿಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಹಬ್ಬದ ದಿನದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.