ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಈ ವರ್ಷ ಡಿಸೆಂಬರ್‌ನಲ್ಲಿ ಜಾಗತಿಕ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಹ್ಯಾಚ್‌ಬ್ಯಾಕ್‌ನ ಹೊಸ ಮಾದರಿಯು ಮುಂದಿನ ವರ್ಷ ಭಾರತಕ್ಕೆ ಬರಲಿದೆ. ಇಂಡೋ-ಜಪಾನ್ ವಾಹನ ತಯಾರಕರು ಹೊಸ 2023ರ ಮಾರುತಿ ಸ್ವಿಫ್ಟ್ ಕಾರನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲಾಂಚ್ ಮಾಡಲಿದ್ದಾರೆ ಎನ್ನಲಾಗ್ತಿದೆ.
ಈ ಆಟೋಮೋಟಿವ್ ಈವೆಂಟ್, ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ ಜನವರಿ 13 ರಿಂದ ಪ್ರಾರಂಭವಾಗಲಿದೆ. ಆದಾಗ್ಯೂ ಭಾರತದಲ್ಲಿ 2023ರ ಮಾರುತಿ ಸ್ವಿಫ್ಟ್ ಬಿಡುಗಡೆ ಬಗ್ಗೆ ಕಂಪನಿ ಇದುವರೆಗೂ ಅಧಿಕೃತ ಮಾಹಿತಿ ನೀಡಿಲ್ಲ.
ಹೊಸ ಜನರೇಶನ್ ಕಾರಿನಲ್ಲಿ ಕೆಲವು ಗಮನಾರ್ಹ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಅಪ್‌ಗ್ರೇಡ್ ಫೀಚರ್‌ಗಳನ್ನು ಇದು ಹೊಂದಿರಲಿದೆ. ಹೊಸ ಮಾರುತಿ ಸ್ವಿಫ್ಟ್ನಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಸಿ-ಆಕಾರದ ಏರ್ ಸ್ಪ್ಲಿಟರ್‌ಗಳೊಂದಿಗೆ ನವೀಕರಿಸಿದ ಬಂಪರ್, ದೊಡ್ಡ ಏರ್-ಇಂಟೆಕ್, ಹೊಸ ಎಲ್ಇಡಿ, ಹೆಡ್‌ಲ್ಯಾಂಪ್‌ಗಳು ಮತ್ತು ಮುಂಭಾಗದಲ್ಲಿ ಹೊಸ ಫಾಗ್ ಲ್ಯಾಂಪ್ ಕೂಡ ಅಳವಡಿಸಲಾಗುತ್ತದೆ.
ಇದು ದೊಡ್ಡದಾದ ಮತ್ತು ಹೊಸ ಡ್ಯುಯಲ್-ಟೋನ್ ಮಿಶ್ರಲೋಹದ ಚಕ್ರಗಳು, ಹೊಸ ಬಾಡಿ ಪ್ಯಾನೆಲ್‌ಗಳು, ವೀಲ್ ಆರ್ಚ್‌ಗಳ ಮೇಲೆ ಫಾಕ್ಸ್ ಏರ್ ವೆಂಟ್‌ಗಳು, ಬ್ಲ್ಯಾಕ್ ಔಟ್ ಪಿಲ್ಲರ್‌ಗಳು ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ.
ಹಿಂದಿನ ವಿಭಾಗದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಬಹುದು. ಹೊಸ ಬಲೆನೊ ಹ್ಯಾಚ್‌ಬ್ಯಾಕ್‌ನಂತೆ ಮಾರ್ಪಡಿಸಿದ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುವುದು. ಹೊಸ ಸ್ವಿಫ್ಟ್ ಉದ್ದ 3845mm, ಅಗಲ 1735mm ಮತ್ತು ಎತ್ತರ 1530mm ಆಗಿರಬಹುದು. ಇದರ ವ್ಹೀಲ್ ಬೇಸ್ 2450mm ಆಗಿರಬಹುದೆಂದು ಅಂದಾಜಿಸಲಾಗಿದೆ.ಹೊಸ 2023 ಮಾರುತಿ ಸ್ವಿಫ್ಟ್ ಅನ್ನು ಸೌಮ್ಯ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.2 ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಲ್ಲಿ ನೀಡಬಹುದು. 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಇರುವ ನಿರೀಕ್ಷೆ ಇದೆ. 1.4 ಲೀಟರ್ ಬೂಸ್ಟರ್‌ಜೆಟ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ಜನರೇಶನ್‌ನ ಸುಜುಕಿ ಸ್ವಿಫ್ಟ್ ಸ್ಪೋರ್ಟ್‌ನಲ್ಲಿ ಕಾಣಬಹುದು.