ಕಳೆದ ವರ್ಷ ಮಾರುತಿ ಸುಜುಕಿ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊದ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದಾಗಿನಿಂದ ಅದರ ಮಾರಾಟವು ಸುಧಾರಿಸಿದೆ. ಬಲೆನೊ ಸದ್ಯ ಭರ್ಜರಿ ಮಾರಾಟ ಕಾಣ್ತಾ ಇದೆ.
2022ರ ಡಿಸೆಂಬರ್‌ನಲ್ಲಿ ಸಹ ಬಲೆನೊ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿತ್ತು. 2023ರ ಜನವರಿ ತಿಂಗಳಿನಲ್ಲಿ ಕೂಡ ಈ ಕಾರುಗಳ ಸೇಲ್ಸ್ ಕುಸಿದಿಲ್ಲ. ವಾರ್ಷಿಕ ಆಧಾರದ ಮೇಲೆ ಬಲೆನೊ ಕಾರುಗಳ ಮಾರಾಟ ಶೇ.141 ರಷ್ಟು ಏರಿಕೆ ಕಂಡಿದೆ. 2022ರ ಜನವರಿಯಲ್ಲಿ ಮಾರುತಿ ಸುಜುಕಿ ಬಲೆನೊದ 6,791 ಯುನಿಟ್‌ಗಳು ಬಿಕರಿಯಾಗಿದ್ದವು.
ಆದರೆ ಈ ವರ್ಷದ ಜನವರಿ ತಿಂಗಳಲ್ಲಿ 16,357 ಯುನಿಟ್‌ಗಳನ್ನು ಮಾರುತಿ ಮಾರಾಟ ಮಾಡಿದೆ. ಬಲೆನೊ ಕಾರಿನ ಬೆಲೆ 6.49 ಲಕ್ಷ ರೂಪಾಯಿಯಿಂದ 9.71 ಲಕ್ಷದವರೆಗೆ ಇದೆ. ಇದು 1.2-ಲೀಟರ್ ಡ್ಯುಯೆಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ ಪೆಟ್ರೋಲ್ ಮೇಲೆ 90 PS ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ CNG ಯಲ್ಲಿ 77.49 PS ಪವರ್ ಮತ್ತು 98.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ.
ಆದರೆ 5-ಸ್ಪೀಡ್ AMT ಟ್ರಾನ್ಸ್‌ಮಿಷನ್ ಐಚ್ಛಿಕವಾಗಿರುತ್ತದೆ. CNG ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ. ಈ ಕಾರಿನಲ್ಲಿ ಹೆಡ್-ಅಪ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮೆರಾ, ಹಿಂಭಾಗದ ಎಸಿ ವೆಂಟ್‌ಗಳು, ಹಿಂಭಾಗದ ವೇಗದ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್, ಎಲ್‌ಇಡಿ ಫಾಗ್ ಲ್ಯಾಂಪ್‌ಗಳಂತಹ ಹಲವು ಫೀಚರ್‌ಗಳಿವೆ.
ಅಷ್ಟೇ ಅಲ್ಲ ಇದು ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್, ಆರ್ಕಾಮಿ ಟ್ಯೂನ್ಡ್ ಸೌಂಡ್ ಸಿಸ್ಟಮ್, ರಿಯರ್ ವ್ಯೂ ಕ್ಯಾಮೆರಾ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ಇದು ಸ್ವಯಂ ಹವಾಮಾನ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳು ಇದರಲ್ಲಿವೆ.