ಸುಜುಕಿ ಮೋಟರ್ ಸೈಕಲ್ ಇಂಡಿಯಾ, ಸದ್ಯದಲ್ಲೇ ಸಾಹಸಿ ಬೈಕ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಪನಿ, ಜಾಲತಾಣದಲ್ಲಿ ಹೊಸ ಬೈಕ್ ನ ಟೀಸರ್ ಇಮೇಜ್ ಒಂದನ್ನು ಪೋಸ್ಟ್ ಮಾಡಿದೆ. ಹಾಗಾಗಿ ಸದ್ಯದಲ್ಲೇ ಈ ಬೈಕ್ ಭಾರತದ ರಸ್ತೆಗಿಳಿಯೋದ್ರಲ್ಲಿ ಅನುಮಾನವಿಲ್ಲ.
ಸುಜುಕಿ ಕಂಪನಿ ಈಗಾಗಲೇ V-Storm 650XT ಬೈಕನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. V-Storm 250 ಹೆಸರಿನಲ್ಲಿ ಅಡ್ವೆಂಚರ್ ಬೈಕ್ ಅನ್ನು ಪರಿಚಯಿಸಲಾಗ್ತಿದೆ. ಇದು ಸುಜುಕಿ ಕಂಪನಿಯ ಅಗ್ಗದ ಸಾಹಸಿ ಬೈಕ್ ಅಂತಾನೂ ಹೇಳಲಾಗ್ತಾ ಇದೆ.
ಭಾರತದಲ್ಲಿ, ಇದು KTM 250 ಅಡ್ವೆಂಚರ್, ರಾಯಲ್ ಎನ್ಫೀಲ್ಡ್ ಹಿಮಾಲಯನ್, ಬೆನೆಲ್ಲಿ TRK 251, BMW G 310 GS ಮತ್ತು Yezzi ಅಡ್ವೆಂಚರ್ನಂತಹ ಇತರ ಬೈಕ್ಗಳೊಂದಿಗೆ ನೇರವಾಗಿ ಸ್ಪರ್ಧೆಗಿಳಿಯಲಿದೆ. ಬೈಕ್ ಎಂಜಿನ್ 249 cc ಸಿಂಗಲ್-ಸಿಲಿಂಡರ್ ಮತ್ತು ಏರ್-ಕೂಲ್ಡ್ ವ್ಯವಸ್ಥೆ ಹೊಂದಿರಲಿದೆ. ಈ ಎಂಜಿನ್ 6-ಸ್ಪೀಡ್ ಗೇರ್ಬಾಕ್ಸ್ಗೆ ಹೊಂದಿಕೆಯಾಗುತ್ತದೆ ಮತ್ತು 26.1 Bhp ಪವರ್ ಜೊತೆಗೆ 22.2 Nm ಪೀಕ್ ಟಾರ್ಕ್ ಅನ್ನು ನೀಡುತ್ತದೆ.
ಸುಜುಕಿ ಕಂಪನಿ, 125 ರಿಂದ 300 ಸಿಸಿವರೆಗಿನ ಎಲ್ಲಾ ದ್ವಿಚಕ್ರ ವಾಹನಗಳನ್ನು ಭಾರತದಲ್ಲಿ ಉತ್ಪಾದಿಸುತ್ತದೆ. ಇಲ್ಲಿಂದ ಅವುಗಳನ್ನು ವಿದೇಶಕ್ಕೆ ರಫ್ತು ಮಾಡುವುದಾಗಿಯೂ ಕಂಪನಿ ಇತ್ತೀಚೆಗೆ ಘೋಷಿಸಿದೆ. ಪ್ರಸ್ತುತ ಸುಜುಕಿ ಕಂಪನಿ ಹರಿಯಾಣದ ಗುರುಗ್ರಾಮ್ದಲ್ಲಿರುವ ತನ್ನ ಸ್ಥಾವರದಲ್ಲಿ ವಾಹನಗಳನ್ನು ಉತ್ಪಾದಿಸುತ್ತಿದೆ. ಈ ಹೊಸ ಅಡ್ವೆಂಚರ್ ಬೈಕ್ ನ ಅಂದಾಜು ಬೆಲೆ 2 ಲಕ್ಷ ರೂಪಾಯಿಗಳು.