ಹೋಂಡಾ ಶೈನ್ ಭಾರತದ ಬೈಕ್ ಪ್ರಿಯರನ್ನು ಸೆಳೆದಿದೆ. ಅದರ ವಿಶ್ವಾಸಾರ್ಹತೆ ಮತ್ತು ಸವಾರಿ ವಿಶಿಷ್ಟ ಅನುಭವ ಗ್ರಾಹಕರಿಗೆ ಇಷ್ಟವಾಗಿದೆ. ಹೋಂಡಾ ಶೈನ್ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದರಿಂದ ಕಂಪನಿ, ಹೋಂಡಾ ಶೈನ್ ಸೆಲೆಬ್ರೇಷನ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಬೈಕ್ನ ಬೆಲೆ 78,878 ರೂಪಾಯಿ ನಿಗದಿಪಡಿಸಲಾಗಿದೆ. ಶೈನ್ ಸೆಲೆಬ್ರೇಶನ್ ಆವೃತ್ತಿಯಲ್ಲಿ ಎರಡು ಹೊಸ ಬಣ್ಣದ ಆಯ್ಕೆಗಳನ್ನು ಹೋಂಡಾ ಕಂಪನಿ ಪರಿಚಯಿಸಿದೆ. ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್ ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ.
ಹಬ್ಬದ ಋತುವಿಗೆಂದೇ ಹೊಸ ಮೋಟಾರ್ ಸೈಕಲ್ ಅನ್ನು ರಸ್ತೆಗಿಳಿಸಿರುವುದಾಗಿ ಹೋಂಡಾ ಕಂಪನಿಯ ಸಿಇಓ ಹೇಳಿದ್ದಾರೆ. ಹೊಸ ಶೈನ್ ಸೆಲೆಬ್ರೇಶನ್ ಆವೃತ್ತಿ, ಆಕರ್ಷಕ ಗೋಲ್ಡನ್ ಥೀಮ್ನೊಂದಿಗೆ ಬಂದಿದೆ. ತಾಜಾ ಸ್ಟ್ರೈಪ್ಗಳು, ಗೋಲ್ಡನ್ ವಿಂಗ್ ಮಾರ್ಕ್ ಲಾಂಛನ, ಲೋಗೋ ಸೇರಿದಂತೆ ಹಲವಾರು ಹೊಸತನ ಈ ಬೈಕ್ನಲ್ಲಿದೆ. ಹೊಸ ಸ್ಯಾಡಲ್ ಬ್ರೌನ್ ಸೀಟ್, ಸವಾರರಿಗೆ ಅತ್ಯಾಧುನಿಕತೆಯ ಟಚ್ ನೀಡಲಿದೆ. ಮೋಟಾರ್ಸೈಕಲ್ 124 cc ಎಂಜಿನ್ ಅನ್ನು ಹೊಂದಿದೆ.