ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಕೆಲವೊಮ್ಮೆ ಸ್ಕಿನ್ ಡ್ರೈ ಇದ್ದಂತೆ ಕಾಣುತ್ತದೆ. ಇನ್ನು ಕೆಲವರಿಗೆ ಹಚ್ಚಿದ ತಕ್ಷಣ ಚರ್ಮ ಜಿಡ್ಡಿನಂತೆ ಆಗಬಹುದು. ಅದಕ್ಕಿಂತ ಅವರ ಸ್ಕಿನ್ ಗೆ ತಕ್ಕಂತೆ ಮಾಯಿಶ್ಚರೈಸರ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಚರ್ಮದ ಸುಕೋಮಲತೆ ಕಾಪಾಡಿಕೊಳ್ಳಲು ಸಾಥ್ ನೀಡುವ ಮಾಯಿಶ್ಚರೈಸರ್ ಖರೀದಿಸುವಾಗ ಒಂದಿಷ್ಟು ಟಿಪ್ಸ್ ಫಾಲೋ ಮಾಡಿ.
ಸ್ಕಿನ್ ಟೈಪ್ ಆಯ್ಕೆ
ಯಾವುದೇ ಸ್ಕಿನ್ ಟೋನ್ ಗೆ ಅನುಗುಣವಾದ ಮಾಯಿಶ್ಚರೈಸರ್ ಕ್ರೀಮ್ ಸಿಗುವುದಿಲ್ಲ. ಇಂತಹ ಕ್ರೀಮ್ ಗಳು ಯಾವಾಗಲೂ ಸ್ಕಿನ್ ಟೈಪ್ ಗೆ ಅನುಗುಣವಾಗಿ ದೊರೆಯುತ್ತದೆ.
ಸರಿಯಾದ ಚಾಯ್ಸ್
ಪ್ರಮುಖವಾದ ಸ್ಕಿನ್ ಟೈಪ್ ಗಳು ಯಾವುದೆಂದರೆ ನಾರ್ಮಲ್, ಆಯ್ಲಿ, ಡ್ರೈ ಸ್ಕಿನ್ ಹಾಗೂ ಇವೆರಡರ ಕಾಂಬಿನೇಷನ್ ಹೊಂದಿರುವ ಸೆನ್ಸಿಟಿವ್ ಸ್ಕಿನ್. ಮೊದಲಿಗೆ ನಿಮ್ಮ ಸ್ಕಿನ್ ಟೈಪ್ ಯಾವುದೆಂದು ಬ್ಯೂಟಿ ಎಕ್ಸ್ ಪರ್ಟ್ ಬಳಿ ತಿಳಿದುಕೊಳ್ಳಬೇಕು. ನಂತರ ಮಾಯಿಶ್ಚರೈಸರ್ ಕ್ರೀಮ್ ಅಥವಾ ಲೋಶನ್ ಖರೀದಿಸಬೇಕು.
ಬಣ್ಣಕ್ಕೆ ತಕ್ಕಂತೆ ಅಲ್ಲ
ಮಾಯಿಶ್ಚರೈಸರ್ ಆಯ್ಕೆ ಮಾಡುವಾಗ ನಿಮ್ಮ ಸ್ಕಿನ್ ಟೈಪ್ ಗೆ ಅನುಗುಣವಾಗಿ ಖರೀದಿಸಬೇಡಿ. ಉದಾಹರಣೆಗೆ ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಹಾಲಿನ ಅಂಶ ಹೆಚ್ಚಿರುವ ಮಾಯಿಶ್ಚರ್ ಕ್ರೀಮ್ ಅಥವಾ ಲೋಷನ್ ಮೊರೆ ಹೋಗಿ.