ಶೈಕ್ಷಣಿಕ ವರ್ಷ ಸಮೀಪಿಸುತ್ತಿದ್ದಂತೆ ಶಿಕ್ಷಣ ಇಲಾಖೆ ಕೆಲವೊಂದು ಮಹತ್ವದ ಆದೇಶಗಳನ್ನು ಹೊರಡಿಸಿದ್ದು, ನೋಂದಣಿ ಪಡೆಯದೆ ನಡೆಸಲಾಗುತ್ತಿರುವ ಖಾಸಗಿ ಶಾಲೆಗಳನ್ನು ಮುಚ್ಚಲು ತಕ್ಷಣ ಕ್ರಮ ವಹಿಸುವುದರ ಜೊತೆಗೆ ಅನಧಿಕೃತ ಶಾಲೆಗಳಿಗೆ ಮಾನ್ಯತೆ ಪಡೆಯಲು 45 ದಿನಗಳ ಗಡುವು ವಿಧಿಸಿದೆ.
2023 – 24ನೇ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಸಲುವಾಗಿ ಮಾರ್ಗಸೂಚಿಗಳನ್ನು ರಚಿಸಲಾಗಿದ್ದು, ಮಾನ್ಯತೆ ಪಡೆಯಲು ವಿಧಿಸಲಾಗಿರುವ 45 ದಿನಗಳ ಗಡುವು ಮುಗಿದ ಬಳಿಕ ಅಂತಹ ಶಾಲೆಗಳ ಮಾನ್ಯತೆ ಹಿಂಪಡೆಯುವುದಾಗಿ ಎಚ್ಚರಿಕೆ ನೀಡಿದೆ.
ಅನುಮತಿ ಪಡೆದ ಶಾಲೆಗಳು ಉನ್ನತೀಕರಿಸಿದ ತರಗತಿಗಳಿಗೆ ಅನುಮತಿ ಪಡೆಯದೆ ಇದ್ದ ಪಕ್ಷದಲ್ಲಿ 45 ದಿನಗಳೊಳಗಾಗಿ ಪಡೆಯಬೇಕಾಗಿದ್ದು, ಇದು ಅಂತಿಮ ಅವಕಾಶವಾಗಿರುತ್ತದೆ. ಅಲ್ಲದೆ ನೋಂದಣಿ ಹಾಗೂ ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚಬೇಕೆಂದು ಸೂಚಿಸಲಾಗಿದೆ.