ಮಾನಸಿಕ ಸಮಸ್ಯೆ ಎಂಬುದು ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಒತ್ತಡದ ಜೀವನ, ಯಾಂತ್ರಿಕೃತ ಬದುಕು ಜನ ಸಾಮಾನ್ಯರನ್ನು ಹೈರಾಣಗಿಸುತ್ತಿದ್ದು, ಜೊತೆಗೆ ಇತರೆ ಕಾರಣಗಳಿಂದಲೂ ಸಹ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ನಿಮ್ಹಾನ್ಸ್ ಸಂಸ್ಥೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ‘ಟೆಲಿ ಮನಸ್’ ಸಹಾಯವಾಣಿ ಸೇವೆಯನ್ನು ಈಗಾಗಲೇ ಆರಂಭಿಸಿದ್ದು, ಸಮಸ್ಯೆ ಇರುವವರು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ತಜ್ಞರ ಜೊತೆ ಸಮಾಲೋಚನೆ ನಡೆಸಬಹುದಾಗಿದೆ. ಇದಕ್ಕಾಗಿ ಟೋಲ್ ಫ್ರೀ ದೂರವಾಣಿ ಸಂಖ್ಯೆ 18008914416 ಸಂಪರ್ಕಿಸಬಹುದಾಗಿದೆ.
ಪ್ರಸ್ತುತ ರಾಜ್ಯದ ವಿವಿಧಡೆಯಿಂದ ಪ್ರತಿನಿತ್ಯ 40ಕ್ಕೂ ಅಧಿಕ ಕರೆಗಳು ಬರುತ್ತಿವೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ‘ಟೆಲಿ ಮನಸ್’ ಸಹಾಯವಾಣಿ ಸೇವೆಯನ್ನು 24X7 ವಿಸ್ತರಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳಿಗೆ ಸಹಾಯವಾಣಿ ಮೂಲಕ ತಜ್ಞರು ಸೂಕ್ತ ಸಲಹೆ, ಸೂಚನೆಗಳೊಂದಿಗೆ ಮಾರ್ಗದರ್ಶನ ನೀಡಲಿದ್ದಾರೆ.