ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಕೆಲಸದಿಂದ ಹಿಡಿದು ಪ್ರತಿ ವಿಭಾಗದಲ್ಲೂ ಒಂದಿಲ್ಲ ಒಂದು ಟೆನ್ಷನ್ ಇದ್ದೇ ಇರುತ್ತದೆ. ಕೆಲವರಿಗೆ ಹಣದ ಸಮಸ್ಯೆಯಾದ್ರೆ ಇನ್ನು ಕೆಲವರು ಕೌಟುಂಬಿಕ ಸಮಸ್ಯೆಗಳಿಂದ ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡಕ್ಕೆ ಹಲವು ಕಾರಣಗಳಿರಬಹುದು, ಆದರೆ ಅದನ್ನು ನಿಯಂತ್ರಿಸದಿದ್ದರೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ.
ಆರೋಗ್ಯಕರ ಆಹಾರ ಸೇವನೆಯಿಂದ ಒತ್ತಡವನ್ನು ನಿವಾರಿಸಬಹುದು. ಒತ್ತಡ ಮುಕ್ತವಾಗಿರಲು ಸಹಾಯ ಮಾಡುವ ಆಹಾರಗಳು ಯಾವುವು ಎಂಬುದನ್ನು ನೋಡೋಣ.
ಒತ್ತಡವನ್ನು ನಿವಾರಿಸುವ ಆಹಾರಗಳು
ಪಾಲಕ್ ಸೊಪ್ಪು – ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಸತು, ಮೆಗ್ನೀಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಹಾಗಾಗಿ ಮೆದುಳಿನಲ್ಲಿ ಆಮ್ಲಜನಕದ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸಂತೋಷದ ಹಾರ್ಮೋನ್ ಸ್ರವಿಸುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ.
ಬ್ರೊಕೊಲಿ – ಹೂಕೋಸುಗಳಂತೆ ಕಾಣುವ ಈ ತರಕಾರಿಯನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ನೀವು ಇದರ ಭಜ್ಜಿ ಅಥವಾ ಸಲಾಡ್ ಅನ್ನು ತಿನ್ನಬೇಕು. ಬ್ರೊಕೊಲಿಯು ಫೋಲೇಟ್ನಲ್ಲಿ ಸಮೃದ್ಧವಾಗಿದೆ, ಇದು ಖಿನ್ನತೆಯನ್ನು ನಿವಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ.
ಓಮ- ಓಮ ಒಂದು ಆಯುರ್ವೇದ ಮಸಾಲೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಹೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸಲು ಬಳಸಲಾಗುತ್ತದೆ. ಆದರೆ ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಹಾಲು – ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಹಾಲಿನಲ್ಲಿ ಕಂಡುಬರುತ್ತವೆ. ಆದ್ದರಿಂದ ಇದನ್ನು ಸಂಪೂರ್ಣ ಆಹಾರ ಎಂದೂ ಕರೆಯುತ್ತಾರೆ. ಹಾಲನ್ನು ಪ್ರತಿನಿತ್ಯ ಸೇವಿಸಿದರೆ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುವುದಲ್ಲದೆ ಇದು ಮನಸ್ಸನ್ನು ತಂಪಾಗಿಡುತ್ತದೆ.
ಬಾದಾಮಿ – ಬಾದಾಮಿ ಮೆದುಳಿಗೆ ಒಳ್ಳೆಯದು. ಈ ಒಣ ಹಣ್ಣನ್ನು ನಿತ್ಯವೂ ಸೇವಿಸಿದರೆ ಮಾನಸಿಕ ಆರೋಗ್ಯಕ್ಕೆ ಉತ್ತಮ. ಯಾವುದೇ ರೀತಿಯ ಒತ್ತಡ ನಿಮ್ಮನ್ನು ಕಾಡುವುದಿಲ್ಲ.