ಬೆಂಗಳೂರು: ವಾಹನ ದಟ್ಟಣೆ ನಡುವೆ ರಸ್ತೆ ದಾಟಲು ಪುಟ್ಟ ಕಂದಮ್ಮನ ಜೊತೆ ತಾಯಿಯೊಬ್ಬರು ಪರದಾಡುತ್ತಿದ್ದ ವೇಳೆ ಮಾನಸಿಕ ಅಸ್ವಸ್ಥನೊಬ್ಬ ತೋರಿದ ಕರುಣೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.
ರಸ್ತೆಯಲ್ಲಿ ಜನರ ಮುಂದೆ ಹುಚ್ಚನಂತೆ ಕಂಡುಬಂದರೂ ಈ ವ್ಯಕ್ತಿ, ಮಗುವನ್ನು ಹೊತ್ತ ಮಹಿಳೆಗೆ ಟ್ರಾಫಿಕ್ ಮಧ್ಯೆ ರಸ್ತೆ ದಾಟಲು ಮಾಡಿದ ಸಹಾಯದ ದೃಶ್ಯ ಮನುಷತ್ವ, ಮಾನವೀಯತೆಗೆ ಸಾಕ್ಷಿಯಾಗಿದೆ. ಮಾನಸಿಕ ಅಸ್ವಸ್ಥನಂತೆ ಕಂಡರೂ ಈ ವ್ಯಕ್ತಿ ಸಮಾಜಕ್ಕೆ ಮಾದರಿ ಎನಿಸದಿರದು…