ಮನಾಲಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಕಾರನ್ನು ಅಪರಿಚಿತರೆಲ್ಲರೂ ಸೇರಿ ಕಾಪಾಡುವ ಮೂಲಕ ಮಾನವೀಯತೆ ಇನ್ನೂ ಬದುಕುಳಿದಿದೆ ಎಂಬುವಂತಹ ಸಂದೇಶವನ್ನು ಸಾರಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಆಧುನಿಕ ಯುಗದಲ್ಲಿ ಜನರು ತಮ್ಮ ನೆರೆಹೊರೆಯವರಿಗೇ ಸಹಾಯ ಮಾಡದ ಈ ಕಾಲದಲ್ಲಿ ಕಷ್ಟ ಅಂತಾ ಬಂದಾಗ ಅಪರಿಚಿತರು ಸಹ ಒಂದಾಗುತ್ತಾರೆ ಎಂಬಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಹಿಮಾಚಲ ಪ್ರದೇಶದ ರಸ್ತೆಯೊಂದರಲ್ಲಿ ಕೆಂಪು ಬಣ್ಣದ ಕಾರು ಸ್ಕಿಡ್ ಆದ ಪರಿಣಾಮ ಚಾಲಕ ಸಂಪೂರ್ಣ ಅಪಾಯಕ್ಕೆ ಸಿಲುಕಿದ್ದನು. ಇದು ದೊಡ್ಡ ಅಪಘಾತಕ್ಕೆ ಕಾರಣವಾಗುವಂತಿತ್ತು.
ಅಪಾಯದಲ್ಲಿದ್ದ ಚಾಲಕನನ್ನು ನೋಡಿದ ದಾರಿಹೋಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಹಾಯಹಸ್ತ ಚಾಚಿದ್ದಾರೆ. ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಾರು ಚಾಲಕ ಆಳವಾದ ಬಿರುಕಿನಿಂದ ತನ್ನ ಕಾರನ್ನು ಬಚಾವು ಮಾಡಲು ಹರಸಾಹಸ ಪಡ್ತಿರೋದನ್ನು ಕಾಣಬಹುದಾಗಿದೆ. ಕಾರನ್ನು ರಸ್ತೆಗೆ ತರಲು ಕೈ ಮೀರಿ ಪ್ರಯತ್ನಿಸುವ ಆತ ಕೊನೆಯಲ್ಲಿ ವಿಫಲನಾಗುತ್ತಾನೆ.
ಸ್ವಲ್ಪ ಸಮಯದ ನಂತರ ತೊಂದರೆಗೀಡಾದ ಚಾಲಕನಿಗೆ ಸಹಾಯಹಸ್ತ ಚಾಚಿದ್ದಾರೆ. ಕಾರನ್ನು ತಳ್ಳುವ ಮೂಲಕ ರಸ್ತೆಗೆ ಎಳೆದು ತಂದಿದ್ದಾರೆ. ಈ ಮೂಲಕ ಮಾನವೀಯತೆ ಎನ್ನುವುದು ಈ ಜಗತ್ತಿನಲ್ಲಿ ಇನ್ನೂ ಜೀವಂತವಾಗಿದೆ ಎಂದು ಸಾಬೀತುಪಡಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ತೊಂದರೆಗೀಡಾದ ಚಾಲಕನಿಗೆ ಸಹಾಯ ಹಸ್ತವನ್ನು ನೀಡಲು ಹಲವಾರು ಪುರುಷರು ಸ್ಥಳಕ್ಕೆ ತೆರಳುತ್ತಾರೆ. ಪ್ರತಿ ಮೂಲೆಯಿಂದ ಕಾರನ್ನು ತಳ್ಳಿ, ಸುದೀರ್ಘ ಹೋರಾಟದ ನಂತರ ವಾಹನವನ್ನು ರಸ್ತೆಗೆ ತರುವಲ್ಲಿ ಯಶಸ್ವಿಯಾದರು.