ಕಳೆದ 150 ವರ್ಷಗಳಿಂದಲೂ ಮಾನವರು ಬಾಹ್ಯಾಕಾಶದಲ್ಲಿರುವ ಅನ್ಯಗ್ರಹದ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಇದುವರೆಗೂ ಈ ಪ್ರಯತ್ನ ಸಫಲವಾಗಿಲ್ಲ. ಅವರೊಂದಿಗಿನ ಸಂಪರ್ಕವನ್ನು ದೃಢೀಕರಿಸುವ ಯಾವುದೇ ಮಾಹಿತಿಯು ಲಭ್ಯವಾಗಿಲ್ಲ.
ಹಾಗಾಗಿ ಏಲಿಯನ್‌ಗಳ ಜೊತೆಗೆ ಸಂಪರ್ಕ ಹೊಂದಲು ನಾಸಾ ವಿಜ್ಞಾನಿಗಳು ಹೊಸ ಪ್ಲಾನ್ ಮಾಡಿದ್ದಾರೆ. ಅದೇನು ಅನ್ನೋದನ್ನು ಕೇಳಿದ್ರೆ ನೀವು ಶಾಕ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ವಿಜ್ಞಾನಿಗಳು ಮನುಷ್ಯರ ನಗ್ನ ಚಿತ್ರವನ್ನು ಬ್ರಹ್ಮಾಂಡಕ್ಕೆ ಕಳುಹಿಸಲು ಯೋಜನೆ ರೂಪಿಸಿದ್ದಾರೆ. ಈ ನಗ್ನ ಚಿತ್ರಗಳು ಏಲಿಯನ್‌ಗಳನ್ನು ಸೆಳೆಯಬಹುದು ಅನ್ನೋದು ವಿಜ್ಞಾನಿಗಳ ಲೆಕ್ಕಾಚಾರ. ಈ ಮೂಲಕ ಏಲಿಯನ್‌ಗಳ ಜೊತೆಗೆ ಸಂಪರ್ಕ ಸಾಧಿಸಲು ಪ್ಲಾನ್ ಮಾಡಲಾಗಿದೆ.
ನಗ್ನ ಪುರುಷ ಮತ್ತು ಮಹಿಳೆಯ ಚಿತ್ರವನ್ನು ಕಳುಹಿಸಲಾಗ್ತಿದೆ. ಈ ಫೋಟೋದಲ್ಲಿ ಇಬ್ಬರೂ ಕೈಬೀಸುತ್ತಿರುವುದನ್ನು ಸಹ ನೀವು ಗಮನಿಸಬಹುದು. ಪಿಕ್ಸಲೇಟೆಡ್ ಛಾಯಾಚಿತ್ರಗಳ ಜೊತೆಗೆ, ಗುರುತ್ವಾಕರ್ಷಣೆಯ ಚಿತ್ರಣ ಮತ್ತು ಡಿಎನ್ಎಯನ್ನು ಕೂಡ ಸೇರಿಸಲಾಗಿದೆ. ಇಂತಹ ಬೈನರಿ-ಕೋಡೆಡ್ ಸಂದೇಶಗಳನ್ನು ಏಲಿಯನ್‌ಗಳು ಅರ್ಥಮಾಡಿಕೊಳ್ಳಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಅನ್ಯಗ್ರಹ ಜೀವಿಗಳ ಸಂವಹನ ವಿಧಾನವು ಮಾನವರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹಾಗಾಗಿಯೇ ವಿಜ್ಞಾನಿಗಳು ಈ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಉದ್ದೇಶಿತ ಸಂದೇಶವು ಸಂವಹನ ಸಾಧನವನ್ನು ರಚಿಸಲು ಮೂಲಭೂತ ಗಣಿತ ಮತ್ತು ಭೌತಶಾಸ್ತ್ರದ ಪರಿಕಲ್ಪನೆಗಳನ್ನು ಒಳಗೊಂಡಿದೆ. ಭೂಮಿಯ ಮೇಲಿನ ಜೀವರಾಸಾಯನಿಕ ಸಂಯೋಜನೆ, ಕ್ಷೀರಪಥದಲ್ಲಿ ಸೌರವ್ಯೂಹದ ಸ್ಥಾನ ಮತ್ತು ಅದರ ಮತ್ತು ಭೂಮಿಯ ಮೇಲ್ಮೈಯ ಡಿಜಿಟಲ್ ಮಾಹಿತಿಯನ್ನು ಸಹ ನೀಡುವ ಮಾಸ್ಟರ್ ಪ್ಲಾನ್‌ನಂತಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ಮಾನವನ ನಗ್ನ ಚಿತ್ರಗಳನ್ನು ಕಳುಹಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಅಂತಹ ಚಿತ್ರಗಳನ್ನು 1972ರಲ್ಲಿ ಪಯೋನೀರ್ 10 ಮಿಷನ್ ಮತ್ತು 1973 ರಲ್ಲಿ ಪಯೋನೀರ್ 11 ಮಿಷನ್ ಸಮಯದಲ್ಲಿ ಕಳುಹಿಸಲಾಗಿದೆ. ಈ ಮೂಲಕ ಅನ್ಯಗ್ರಹ ಜೀವಿಗಳಿಗೆ ಆಳವಾದ ಸಂದೇಶ ನೀಡುವ ಪ್ರಯತ್ನ ನಡೆದಿದೆ.