alex Certify ಮಾನವನ ಜೀವನದಲ್ಲಿ ಸ್ನೇಹಿತರಿಗಿದೆ ವಿಶೇಷ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವನ ಜೀವನದಲ್ಲಿ ಸ್ನೇಹಿತರಿಗಿದೆ ವಿಶೇಷ ಸ್ಥಾನ

Friend- Few Relations In the Earth Never Die.-ಕೆಲವು ಸಂಬಂಧಗಳು ಈ ಭೂಮಿಯ ಮೇಲೆ ಎಂದಿಗೂ ಸಾಯುವುದಿಲ್ಲ – ಅದೇ ಗೆಳೆತನ; One loyal friend is worth ten thousend relatives- ಓರ್ವ ಪ್ರಾಣ ಸ್ನೇಹಿತ ಹತ್ತು ಸಾವಿರ ಸಂಬಂಧಿಕರಿಗೆ ಸಮಾನ……ಅಬ್ಬಾ ಎಂತಹ ಮಾತು.

ಸ್ನೇಹಕ್ಕೆ ಅಷ್ಟೊಂದು ಮಹತ್ವವಿದೆ….ಸ್ನೇಹ ಎಂದರೆ ಒಂದು ಜವಾಬ್ದಾರಿ, ಜೀವನದುದ್ದಕ್ಕೂ ನಿಭಾಯಿಸುವಂತಹ ಒಂದು ಶಕ್ತಿ……ಅಮ್ಮನ ಪ್ರೀತಿ, ಅಪ್ಪನ ಕಾಳಜಿ, ಅಕ್ಕನ ಅಕ್ಕರೆ, ಅಣ್ಣನ ರಕ್ಷೆ, ತಮ್ಮನ ತರಲೆ, ತಂಗಿಯ ತುಂಟತನ, ಹೀಗೆ ಎಲ್ಲರನ್ನೂ, ಎಲ್ಲವನ್ನೂ ಒಂದೇ ಫ್ರೇಮ್ ನೊಳಗೆ ಹಿಡಿದಿಡುವ ಭಾವಗಳ ಮೀಟುಗೋಲು; ಜಾತಿ, ಧರ್ಮ, ಮತ, ಹಿರಿಯ-ಕಿರಿಯ, ಬಡವ-ಬಲ್ಲಿದ, ದೇಶ-ವಿದೇಶ, ಕಷ್ಟ-ಸುಖ, ಸಂತೋಷ-ಸಂತಾಪ ಹೀಗೆ ಭಾವಗಳ ಸಮಷ್ಟಿ…..ಸಂಬಂಧಗಳ ಸಂಗಮ……ನಿತ್ಯ ನೂತನ, ಎಲ್ಲವನ್ನೂ ಮೀರಿದ ಬಂಧವದು. ಇಷ್ಟೆಲ್ಲ ಪೀಠಿಕೆ ಏಕೆ ಅಂತೀರಾ….ಆಗಸ್ಟ್‌ 7 ರ ಇಂದು ಆಚರಿಸಲಾಗುತ್ತಿರುವ ಸ್ನೇಹಿತರ ದಿನಾಚರಣೆಗಾಗಿ ಈ ವಿಶೇಷ ಲೇಖನ.

ಹೌದು. ಅಗಸ್ಟ್‌ ತಿಂಗಳ ಮೊದಲ ಭಾನುವಾರವನ್ನು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಈ ದಿನವನ್ನು ಆ.7 ರಂದು ಆಚರಿಸಲಾಗುತ್ತಿದೆ. ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಸ್ನೇಹಿತರ ದಿನಾಚರಣೆ ಅಥವಾ ಈ ಫ್ರೆಂಡ್ ಶಿಪ್ ಡೇ ಈಗ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಸ್ನೇಹಿತರ ದಿನದ ಆಚರಣೆಯನ್ನು ಮೊದಲ ಬಾರಿಗೆ 1958ರಲ್ಲಿ ಪೆರುಗ್ವೆಯಲ್ಲಿ ಆರಂಭಿಸಲಾಯಿತು ಎನ್ನಲಾಗುತ್ತೆ. ಅಂದು ಅಲ್ಲಿಂದ ಆರಂಭವಾದ ಈ ಆಚರಣೆ ಇಂದು ಭಾರತದಲ್ಲಿ ಕೂಡ ಸ್ನೇಹದ ಸಂಕೇತವಾಗಿ ಪರಸ್ಪರರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಕಟ್ಟಿ ಈ ದಿನವನ್ನು ಆಚರಿಸುವುದು ವಾಡಿಕೆಯಾಗಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2011 ಏ.27 ರಂದು ಜುಲೈ 30ನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ, ಸ್ನೇಹಿತರ ದಿನದ ಆಚರಣೆ ಒಂದೊಂದು ದೇಶದಲ್ಲಿ ಒಂದೊಂದು ದಿನದಂದು ಆಚರಿಸಿಕೊಂಡು ಬರಲಾಗುತ್ತಿದೆ. ಅರ್ಜಂಟೀನಾ ಮತ್ತು ಬ್ರೆಜಿಲ್‌ನಲ್ಲಿ ಜು.20 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಹಾಗೆ ಉರುಗ್ವೆಯಲ್ಲಿ ಜು. 30 ರಂದು ಸ್ನೇಹಿತರ ದಿನವನ್ನು ಆಚರಿಸುತ್ತಾರೆ. ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಆಗಸ್ಟ್‌ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸುವ ಸಂಪ್ರದಾಯ ರೂಢಿಯಲ್ಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...