ಇಂದಿನ ಜಮಾನ ಎಷ್ಟು ಬ್ಯುಸಿ ಎಂದರೆ ಯಾವುದಾದರೂ ಅನಾರೋಗ್ಯಕ್ಕೆ ವೈದ್ಯರು ಕೊಟ್ಟ ಮಾತ್ರೆ ತಿನ್ನಲೂ ನಮಗೆ ಬಿಡುವಿರುವುದಿಲ್ಲ. ಕೈಗೆ ಸಮೀಪದಲ್ಲಿರುವ ಚಹಾ, ಕಾಫಿ ಅಥವಾ ಹಾಲಿನ ಸಹಾಯದಿಂದಲೇ ಮಾತ್ರೆಯನ್ನು ನುಂಗಿ ಬಿಡುತ್ತೇವೆ. ಕೆಲವೊಮ್ಮೆ ಜ್ಯೂಸ್ ಜೊತೆಗೂ ಸೇವಿಸುವುದುಂಟು.
ಇದು ಖಂಡಿತಾ ಒಳ್ಳೆಯದಲ್ಲ. ಮಾತ್ರೆ ತಿನ್ನಲು ಕಡ್ಡಾಯವಾಗಿ ನೀರನ್ನೇ ಬಳಸಿ. ಉಗುರು ಬೆಚ್ಚಗಿನ ನೀರಾದರೆ ಮತ್ತೂ ಒಳ್ಳೆಯದು. ಹಣ್ಣಿನ ರಸದೊಂದಿಗೆ ಬೆರೆತ ಮಾತ್ರೆ ದೇಹದೊಳಗೆ ಬೇರೆಯದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತದೆ.
ಮಾತ್ರೆ ತಿಂದ ಬಳಿಕ ಹೆಚ್ಚು ನೀರು ಸೇವನೆಯಿಂದ ಅದರಲ್ಲಿರುವ ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕುವುದೂ ಸುಲಭವಾಗುತ್ತದೆ. ನೀರು ಹೆಚ್ಚು ಸೇವಿಸಿದಷ್ಟು ಜೀರ್ಣಕ್ರಿಯೆ ಸಲೀಸಾಗಿ ನಡೆಯುತ್ತದೆ. ದೇಹ ಹಲವು ರೋಗಗಳು ಬರದಂತೆ ತಡೆಯುತ್ತದೆ.
ನೀರು ಹೆಚ್ಚು ಕುಡಿಯುವ ಮೂಲಕವೇ ಜ್ವರ, ನೆಗಡಿ, ಕೆಮ್ಮಿನಿಂಥ ಸಮಸ್ಯೆಗಳನ್ನು ದೂರ ಮಾಡಬಹುದು. ಹಾಗಾಗಿ ಹಣ್ಣಿನ ರಸ ಅಥವಾ ಚಹಾ ಕಾಫಿಯನ್ನು ಪಕ್ಕಕ್ಕಿಟ್ಟು ಕೇವಲ ನೀರಿನ ಸಹಾಯದಿಂದಲೇ ಮಾತ್ರೆಗಳನ್ನು ತಿನ್ನಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.