ಸಬ್ಬಕ್ಕಿ : 2 ಕಪ್
ಹಾಲು : 2 ಲೀಟರ್
ಸಕ್ಕರೆ : 2 ಕಪ್
ಒಣದ್ರಾಕ್ಷಿ : 2 ಚಮಚ
ಗೋಡಂಬಿ : 2 ಚಮಚ
ನೀರು : 2 ಕಪ್
ಮಾಡುವ ವಿಧಾನ :
ರಾತ್ರಿಯೇ ಸಬ್ಬಕ್ಕಿಯನ್ನು ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ನೀರನ್ನು ಶೋಧಿಸಿ ಸಬ್ಬಕ್ಕಿಯನ್ನು ಪ್ರತ್ಯೇಕಿಸಿಕೊಳ್ಳಬೇಕು. ನಂತರ ಒಂದು ಬೌಲ್ ನಲ್ಲಿ ಸಬ್ಬಕ್ಕಿ ಮತ್ತು ಹಾಲನ್ನು ಮಿಶ್ರಣ ಮಾಡಿಟ್ಟುಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ದಪ್ಪ ತಳದ ಬಾಣಲೆಗೆ ವರ್ಗಾಯಿಸಿಕೊಂಡು, ಸುಮಾರು 20 ನಿಮಿಷ ಸಣ್ಣ ಜ್ವಾಲೆಯಲ್ಲಿ ಕುದಿಸಿಕೊಳ್ಳಿ.
ಸಬ್ಬಕ್ಕಿ ಅಥವಾ ಸಾಬುದಾನವನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಲ್ಲಿ ಹಾಲಿನಲ್ಲಿ ಬೇಯಿಸಿದಾಗ ಅದು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಈ ರೀತಿ ಮಾಡುವುದರಿಂದ ಹಾಲು ಕೆನೆಗಟ್ಟುತ್ತದೆ ಹಾಗೂ ಖೀರ್ ಅತ್ಯಂತ ಸ್ವಾದಿಷ್ಟ ರುಚಿಯನ್ನು ಪಡೆದುಕೊಳ್ಳುತ್ತದೆ.
ನಂತರ ಒಂದು ಬೌಲ್ ನಲ್ಲಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ನೀರಿನಲ್ಲಿ ಚೆನ್ನಾಗಿ ಕರಗುವವರೆಗೂ ಕಲಕುತ್ತಾ ಇರಿ. ಕರಗಿದ ನಂತರ ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಈ ಸಕ್ಕರೆ ನೀರನ್ನು ಬೆರೆಸಿ . ಮಿಶ್ರಣದ ಪ್ರಮಾಣ ಗಟ್ಟಿಯಾಗುವವರೆಗೂ ಕುದಿಸುತ್ತಲೇ ಇರಿ.
ಕೊನೆಯಲ್ಲಿ ಸ್ಟೌವ್ ನಿಂದ ಕೆಳಗೆ ಇಳಿಸಿ, ಇದಕ್ಕೆ ದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ಸೇರಿಸಿ. ಬೇಕಿದ್ದಲ್ಲಿ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ನಂತರ ಕೂಡ ಸೇವಿಸಬಹುದು.