ಆಯುರ್ವೇದದಲ್ಲಿ ದಾಸವಾಳವು ಔಷಧಿಯ ಗುಣಗಳನ್ನು ಹೊಂದಿದೆ. ದಾಸವಾಳ ಟೀ ಮಾಡಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಒಣಗಿದ ದಾಸವಾಳದ ಹೂವುಗಳನ್ನು ಹಾಕಿ ಕುದಿಸಿ.
ನಂತರ ಅದನ್ನು ಸೋಸಿ ಇನ್ನೊಂದು ಪಾತ್ರೆಗೆ ಹಾಕಿ. ರುಚಿಗೆ ಬೇಕಾದಷ್ಟು ಸಕ್ಕರೆ ಇಲ್ಲವೇ ಜೇನುತುಪ್ಪ ಹಾಕಿ. ನಂತರ ಪುದೀನಾ ಮತ್ತು ನಿಂಬೆರಸವನ್ನು ಮಿಶ್ರಣ ಮಾಡಿದರೆ ದಾಸವಾಳದ ಚಹಾ ಸವಿಯಲು ಸಿದ್ಧವಾಗುತ್ತದೆ.
ಕಡಿಮೆ ರಕ್ತದೊತ್ತಡ ಸಮಸ್ಯೆ ಇರುವವರು, ಗರ್ಭಿಣಿಯರು, ಹಾರ್ಮೋನ್ ಚಿಕಿತ್ಸೆಗೆ ಒಳಗಾದವರು ಇದನ್ನು ಸೇವಿಸದೆ ಇರುವುದು ಒಳ್ಳೆಯದು. ಇದು ಕುಡಿದರೆ ಅಮಲೇರಿದ ಅನುಭವ ಕೆಲವರಿಗೆ ಆಗುವುದುಂಟು. ಹಾಗಾಗಿ ವಾಹನ ಸಂಚಾರ ಮಾಡುವಾಗ ಇದನ್ನು ಕುಡಿಯದೆ ಇರುವುದು ಒಳ್ಳೆಯದು.