ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಅದರ ಸಿಪ್ಪೆಯಿಂದಲೂ ಪ್ರಯೋಜನವಿದೆ ಎಂಬುದು ನಿಮಗೆ ಗೊತ್ತೇ…?
ದಾಳಿಂಬೆ ಸಿಪ್ಪೆಯಿಂದ ಚಹಾ ತಯಾರಿಸಬಹುದು. ಚಹಾ ತಯಾರಿಸುವ ವಿಧಾನವನ್ನು ತಿಳಿಯೋಣ.
ಪಾತ್ರೆಗೆ ಒಣಗಿದ ದಾಳಿಂಬೆ ಸಿಪ್ಪೆ ಹಾಕಿ ನೀರಿನಲ್ಲಿ ಕುದಿಸಿ. 5 ನಿಮಿಷ ಕುದಿಸಿ ಸೋಸಿಕೊಳ್ಳಿ ಬಳಿಕ ಆರಲು ಬಿಡಿ. ಇದನ್ನು ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು.
ಭೇದಿ ಶುರುವಾದಾಗ ಈ ದಾಳಿಂಬೆ ಚಹಾ ಕುಡಿದರೆ ಕಡಿಮೆಯಾಗುತ್ತದೆ. ಮಕ್ಕಳಿಗೂ ಇದನ್ನು ಕೊಡಬಹುದು.
ಗಂಟಲ ಕೆರೆತಕ್ಕೂ ಈ ಚಹಾ ದಿವ್ಯೌಷಧ. ವಿಟಮಿನ್ ಸಿ ಹೆಚ್ಚಿರುವ ಇದನ್ನು ನಿತ್ಯ ಸೇವಿಸುವ ಮೂಲಕ ನೀವು ಸಣ್ಣಗಾಗಬಹುದು. ಹಲ್ಲು ನೋವಿನ ಸಮಸ್ಯೆ ಆಥವಾ ಉಸಿರಾಟದಲ್ಲಿ ದುರ್ಗಂಧ ಇದ್ದವರು ಈ ಚಹಾ ಕುಡಿದು ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು.