ಹೆಸರು ಹಿಟ್ಟು-250 ಗ್ರಾಂ, ಕಡಲೆ ಹಿಟ್ಟು-250 ಗ್ರಾಂ, ಮೈದಾ-250 ಗ್ರಾಂ, ಉದ್ದಿನ ಹಿಟ್ಟು-250 ಗ್ರಾಂ, ಉಪ್ಪು-2 ಚಮಚ, ಎಣ್ಣೆ-250 ಗ್ರಾಂ, ಖಾರದ ಪುಡಿ-5 ಚಮಚ, ಮಸಾಲೆ ಪುಡಿ-50 ಗ್ರಾಂ, ಹಾಗೂ 2 ಲೀಟರ್ ನೀರು.
ತಯಾರಿಸುವ ವಿಧಾನ:
ಹೆಸರು ಹಿಟ್ಟು, ಕಡಲೆ ಹಿಟ್ಟು, ಮೈದಾ, ಉದ್ದಿನ ಹಿಟ್ಟು, ಉಪ್ಪು, ಖಾರದ ಪುಡಿ, ಮಸಾಲೆ ಪುಡಿ, ನೀರನ್ನು ಅಗಲವಾದ ಸ್ಟೀಲ್ ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಕಲೆಸಿರಿ. ಸ್ವಲ್ಪವೂ ಗಂಟಾಗದಂತೆ ತಿಳಿಯಾಗಿ ದೋಸೆ ಹಿಟ್ಟಿನ ರೀತಿ ಮಾಡಿಕೊಳ್ಳಿರಿ. ಅಗಲವಾದ ಕಾವಲಿಯನ್ನು ಒಲೆಯ ಮೇಲಿಟ್ಟು ಕಾಯಿಸಿರಿ.
ಕಾವಲಿ ಕಾದ ಬಳಿಕ ಒಂದೆರಡು ಚಮಚ ಎಣ್ಣೆ ಹಾಕಿ. ದೊಡ್ಡ ಚಮಚದಿಂದ ಕಲೆಸಿಟ್ಟುಕೊಂಡ ಹಿಟ್ಟು ತೆಗೆದು ಕಾವಲಿ ಮೇಲೆ ಅಗಲವಾಗಿ ದೋಸೆ ಹಾಕಿ.
ಎರಡೂ ಬದಿಯಲ್ಲಿ ಗರಿ ಗರಿಯಾಗಿ ಬೇಯಿಸಿ ನಂತರ ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿ, ಯಾವುದಾದರೂ ಚಟ್ನಿ ಮತ್ತು ಪಲ್ಯದ ಜೊತೆಗೆ ಸವಿಯಿರಿ.