ಕೋವಿಡ್ ಸಾಂಕ್ರಾಮಿಕದ ಬಳಿಕ ಇದೀಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬಂದ್ ಆಗಿದ್ದ ಸಾಕಷ್ಟು ಅಂಗಡಿಗಳು ಇದೀಗ ಒಂದೊಂದಾಗಿಯೇ ತಲೆ ಎತ್ತುತ್ತಿವೆ. ಅದೇ ರೀತಿ ದೆಹಲಿಯಲ್ಲಿ ನಿಮಗೆ ಬಿಳಿಯ ಕಾರಿನೊಳಗೆ ಒಂದು ಉಪಹಾರ ಗೃಹ ಕಾಣಲಿದೆ.
ಸೆಕ್ಟರ್ 7ರ ನಿವಾಸಿ ಮಾಜಿ ಪ್ರಾಪರ್ಟಿ ಡೀಲರ್ ಡಾಲಿ ಶರ್ಮಾ ಜೀವನದಲ್ಲಿ ಸ್ವತಂತ್ರರಾಗಲು ಬಯಸುತ್ತಿರುವ ಕಾರಣ ಈ ರೀತಿಯ ಉದ್ಯಮಕ್ಕೆ ಕೈ ಹಾಕಿದ್ದಾರೆ.
ತಮ್ಮ 30ನೇ ವರ್ಷದಲ್ಲಿ ಸ್ನೇಹಿತರೊಬ್ಬರಿಂದ ಪ್ರೇರಣೆ ಪಡೆದ ಡಾಲಿ ಮೂರು ವರ್ಷಗಳ ಹಿಂದೆ ಈ ಉಪಹಾರ ಗೃಹವನ್ನು ಆರಂಭಿಸಿದರು. ತಮ್ಮ ಉಪಹಾರ ಗೃಹದಲ್ಲಿ ಮನೆಯಲ್ಲಿ ತಯಾರಿಸಿದಂತಹ ರುಚಿ ಹಾಗೂ ಗುಣಮಟ್ಟವನ್ನು ಹೊಂದಿದ ಆಹಾರವನ್ನೇ ನೀಡಲು ಆರಂಭಿಸಿದ್ದರು. ಆದರೆ ಕೋವಿಡ್ನಿಂದಾಗಿ ಎಲ್ಲರ ಜೀವನವೇ ತಲೆಕೆಳಗಾಯ್ತು. ಲಾಕ್ಡೌನ್ ಸಮಯದಲ್ಲಿ ಡಾಲಿ ಶರ್ಮಾರ ಉದ್ಯಮಕ್ಕೆ ಅಡೆ ತಡೆಗಳು ಉಂಟಾದವು.
ಆದರೆ ಇದೀಗ ಜಗತ್ತು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಡಾಲಿ ಕೂಡ ತಮ್ಮ ಉದ್ಯಮವನ್ನು ಮತ್ತೊಮ್ಮೆ ಪುನಾರಂಭಿಸಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಈ ವಾಹನದಲ್ಲಿ ಆಹಾರ ಲಭ್ಯವಿರುತ್ತದೆ.