ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹೆಲಿಕ್ಯಾಪ್ಟರ್ ನಿಂದ ಇಳಿಯುವ ಸಂದರ್ಭದಲ್ಲಿ ಸಮೀಪದಲ್ಲೇ ಡ್ರೋನ್ ಹಾರಾಟ ನಡೆಸಿದ್ದು, ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಭಾನುವಾರದಂದು ನಡೆದಿದೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ದೇವೇಗೌಡರು ದಾಬಸ್ ಪೇಟೆ ಸಮೀಪದ ನಿಡವಂದಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದರು. ಹೀಗಾಗಿ ಗ್ರಾಮದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಹೆಲಿಕ್ಯಾಪ್ಟರ್ ಲ್ಯಾಂಡ್ ಆದ ಬಳಿಕ ಅವರು ಇಳಿಯಲು ಮುಂದಾದ ವೇಳೆ ಸಮೀಪದಲ್ಲಿ ಡ್ರೋನ್ ಹಾರಾಟ ನಡೆಸುತ್ತಿತ್ತು. ಹೀಗಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಬಳಿಕ ಪೊಲೀಸರು ಡ್ರೋನ್ ಹಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿ ಅದನ್ನು ನಿಲ್ಲಿಸುವಂತೆ ಸೂಚಿಸಿದ ಬಳಿಕ ದೇವೇಗೌಡರು ಹೆಲಿಕ್ಯಾಪ್ಟರ್ ನಿಂದ ಕೆಳಗಿಳಿದರು.