ಭೀಕರ ಅಪಘಾತಗಳಲ್ಲಿ ವಿಸ್ಮಯಕಾರಿಯಾಗಿ ಜನರು ಬದುಕಿ ಬಂದಿರೋ ಅನೇಕ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಬೈಕ್ ಸ್ಟಂಟ್‌ಗಳು ಕೂಡ ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟ್ರೇಟರ್ ಆಕಾಶ್ ಛೋಪ್ರಾ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರೋ ವಿಡಿಯೋ ನೋಡಿದ್ರೆ ಎಂಥವರು ಕೂಡ ದಂಗಾಗಿ ಹೋಗ್ತಾರೆ. ಟ್ರಕ್ ಒಂದು ವೇಗವಾಗಿ ಹೋಗುತ್ತಿರುತ್ತದೆ.
ಲಾರಿಯ ಪಕ್ಕದಲ್ಲೇ ಹೋಗುತ್ತಿದ್ದ ಕಾರೊಂದನ್ನು ಚಾಲಕ ಕೆಲವೇ ಕ್ಷಣದಲ್ಲಿ ಅದರ ಅಡಿಯಲ್ಲೇ ತಂದು ಬಿಡುತ್ತಾನೆ. ಆ ಕಾರು ಲಾರಿಯ ಅಡಿಭಾಗದಲ್ಲೇ ಚಲಿಸುತ್ತ ನಿಧಾನವಾಗಿ ಮತ್ತೊಂದು ದಿಕ್ಕಿನಿಂದ ಹೊರಬೀಳುತ್ತದೆ. ಸಣ್ಣ ತರಚು ಗಾಯವೂ ಇಲ್ಲದೆ ಆರಾಮಾಗಿ ಕಾರು ಲಾರಿಯ ಅಡಿಯಿಂದ ಹೊರಬಿದ್ದಿದೆ. ಈ ವಿಡಿಯೋವನ್ನು ಆಕಾಶ್ ಛೋಪ್ರಾ ಶೇರ್ ಮಾಡಿದ್ದಾರೆ. ಇಂಥಾ ಸಾಹಸ ಮಾಡಿದ ಕಾರು ಚಾಲಕನಿಗೆ ಹ್ಯಾಟ್ಸಾಫ್ ಎಂದಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಮೆಂಟ್‌ಗಳನ್ನು ಹರಿಬಿಟ್ಟಿದ್ದಾರೆ.