ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಥಮ ದರ್ಜೆ ಪಂದ್ಯವನ್ನಾಡಿರುವ ಮಾಜಿ ಕ್ರಿಕೆಟಿಗರಿಗೆ ನೀಡುತ್ತಿದ್ದ ಪಿಂಚಣಿಯನ್ನು ಶೇ.100 ರಷ್ಟು ಏರಿಕೆ ಮಾಡಲಾಗಿದ್ದು, 15 ಸಾವಿರ ರೂ. ಪಡೆಯುತ್ತಿದ್ದವರು ಇನ್ನು ಮುಂದೆ 30 ಸಾವಿರ ರೂ. ಪಡೆಯಲಿದ್ದಾರೆ.
ಟೆಸ್ಟ್ ತಂಡದ ಮಾಜಿ ಆಟಗಾರರು ಈವರೆಗೆ 37,500 ರೂ. ಪಿಂಚಣಿ ಪಡೆಯುತ್ತಿದ್ದು, ಇನ್ನು ಮುಂದೆ 60 ಸಾವಿರ ರೂಪಾಯಿ ಪಡೆಯಲಿದ್ದಾರೆ. ಹಾಗೆಯೇ 50 ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದವರು 70 ಸಾವಿರ ರೂ. ಪಡೆಯಲಿದ್ದಾರೆ.
ಪಿಂಚಣಿ ಹೆಚ್ಚಳ ಮಾಡಿರುವ ಕುರಿತಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದು, ರಾಷ್ಟ್ರೀಯ ಮಹಿಳಾ ತಂಡದಲ್ಲಿದ್ದ ಆಟಗಾರರು 30 ಸಾವಿರ ರೂ. ಬದಲು 52,500 ರೂ. ಪಡೆಯಲಿದ್ದರೆ, 2003 ಕ್ಕೂ ಮುನ್ನ ನಿವೃತ್ತಿಯಾಗಿರುವ ಪ್ರಥಮ ದರ್ಜೆ ಆಟಗಾರರು 22,500 ರೂಪಾಯಿ ಬದಲಿಗೆ 45 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ.
ಒಟ್ಟು 900 ಮಾಜಿ ಆಟಗಾರರು ಈ ಪಿಂಚಣಿ ಹೆಚ್ಚಳದ ಲಾಭ ಪಡೆಯಲಿದ್ದಾರೆ ಎಂದು ಜಯ್ ಶಾ ತಿಳಿಸಿದ್ದಾರೆ.