ಇಂದಿನಿಂದ ಮಾಘ ಮಾಸ ಪ್ರಾರಂಭವಾಗಲಿದೆ. ಈ ಮಾಸ ಸಕಲ ಪಾಪಗಳನ್ನು ಕಳೆಯುವ ಮಾಸವೆಂದು ಹೇಳುತ್ತಾರೆ. ಹಾಗಾಗಿ ಪಾಪಕರ್ಮಗಳು ಕಳೆದು ಜೀವನದಲ್ಲಿ ನಾವು ಏಳಿಗೆ ಹೊಂದಲು ಈ ಮಾಸದಲ್ಲಿ ಇಂತಹ ಕೆಲಸಗಳನ್ನು ಮಾಡಿ.
ಪದ್ಮಪುರಾಣದಲ್ಲಿ ಮಾಘ ಮಾಸದ ಸ್ನಾನಕ್ಕೆ ವಿಶೇಷವಾದ ಮಹತ್ವವಿದೆ ಎಂದು ತಿಳಿಸಲಾಗಿದೆ. ಈ ಮಾಸದಲ್ಲಿ ಪ್ರತಿದಿನ ಸೂರ್ಯೋದಯದ ವೇಳೆ ಮಕರ ಲಗ್ನದಲ್ಲಿ ಅಥವಾ 7 ಗಂಟೆಯೊಳಗೆ ನದಿಯಲ್ಲಿ ಯಾರು ಸ್ನಾನ ಮಾಡುತ್ತಾರೋ ಅವರು ಎಲ್ಲಾ ದೋಷಗಳಿಂದ ಮುಕ್ತರಾಗುತ್ತಾರೆ.
ಹಾಗೇ ಸ್ನಾನ ಮಾಡುವ ವೇಳೆ ಅವರು “ದುಃಖ ದಾರಿದ್ರ ನಾಶಾಯ ಶ್ರೀ ವಿಷ್ಣುಸ್ತೋಷಣಾಯಚ ಪ್ರಾತಃ ಸ್ನಾನಂ ಕರೆಮ್ಯದ್ಯ ಮಾಘೇ ಪಾಪ ವಿನಾಶನಂ” ಎಂಬ ಮಂತ್ರವನ್ನು ಜಪಿಸಿದರೆ ತುಂಬಾ ಒಳ್ಳೆಯದು. ಹಾಗೇ ಈ ಮಾಸದಲ್ಲಿ ಕಪ್ಪು ಎಳ್ಳನ್ನು ದಾನ ಮಾಡಿದರೆ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ. ಸ್ವರ್ಗ ಪ್ರಾಪ್ತಿಯಾಗುತ್ತದೆಯಂತೆ.