
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾವಿರಾರು ವೀಕ್ಷಣೆಗಳು ಹಾಗೂ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ಗೂಡ್ಸ್ ರೈಲು ವೇಗದಲ್ಲಿ ಹಾದುಹೋಗುವುದನ್ನು ನೋಡಬಹುದು.
ರೈಲು ನಿಲ್ದಾಣದಿಂದ ಮುಂದೆ ಹೋದ ಬಳಿಕ, ಕೆಂಪು ಕುರ್ತಾ ಮತ್ತು ಮುಖದ ಮೇಲೆ ಸ್ಕಾರ್ಫ್ ಧರಿಸಿರುವ ಮಹಿಳೆ ಎದ್ದು ಕುಳಿತಿದ್ದಾಳೆ. ರೈಲು ತನ್ನ ಮೇಲೆ ಹಾದು ಹೋಗುತ್ತಿರುವುದನ್ನು ಕಂಡ ಮಹಿಳೆ ಕೂಡಲೇ ರೈಲ್ವೆ ಹಳಿಗಳ ಮೇಲೆ ಮಲಗಿದ್ದಾಳೆ. ರೈಲು ಹೊರಟ ತಕ್ಷಣ, ಮಹಿಳೆ ಹಳಿಗಳ ಮೇಲೆ ಕುಳಿತು ತನ್ನ ಫೋನ್‌ನಿಂದ ಕರೆ ಮಾಡುತ್ತಾಳೆ. ನಂತರ ಆಕೆ ಏನೂ ನಡೆದೇ ಇಲ್ಲ ಎಂಬಂತೆ, ರೈಲು ಹಳಿಯಿಂದ ಎದ್ದು ಫ್ಲಾಟ್‌ಫಾರ್ಮ್‌ಗೆ ಬರುತ್ತಾಳೆ. ಫ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಘಟನೆಯ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.
ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಹಲವಾರು ಮಂದಿ ಈ ವಿಡಿಯೋವನ್ನು ನೋಡಿ ಉಲ್ಲಾಸದಿಂದ ಪ್ರತಿಕ್ರಿಯಿಸಿದ್ದಾರೆ.