ಛತ್ತೀಸ್ಗಢದ ಜಾಂಜ್ಗೀರ್ ಚಂಪಾ ಜಿಲ್ಲೆಯಲ್ಲಿ ನಿರ್ಭಯಾ ಪ್ರಕರಣದ ರೀತಿಯದ್ದೇ ಕ್ರೌರ್ಯ ನಡೆದಿದೆ. 52 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ, ಬರ್ಬರವಾಗಿ ಅವಳನ್ನು ಹತ್ಯೆ ಮಾಡಿದ್ದಾನೆ.
ಮಹಿಳೆಯ ಖಾಸಗಿ ಅಂಗದೊಳಗೆ ಫ್ಯಾನ್ನ ಹಿಡಿಕೆಯನ್ನು ಹಾಕಿದ ಕಾಮುಕ, ಆಕೆಯನ್ನು ಹಿಂಸಿಸಿದ್ದಾನೆ. ಪಾದಗಳ ಮೂಳೆ, ಗಂಟಲು ಮತ್ತು ಎದೆಯ ಮೂಳೆಗಳನ್ನೆಲ್ಲ ಪುಡಿಗಟ್ಟಿದ್ದಾನೆ. ಕಾಮುಕನ ಕ್ರೌರ್ಯಕ್ಕೆ ನಲುಗಿದ ಮಹಿಳೆ ಸಾವನ್ನಪ್ಪಿದ್ದಾಳೆ.
ಮಹಿಳೆ ಪಾತ್ರೆ ತೊಳೆಯುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ಲು. ಮನೆಯಲ್ಲೇ ಅರೆಬೆತ್ತಲೆ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಮಹಿಳೆಯ ಪೋಸ್ಟ್ ಮಾರ್ಟಮ್ ಬಳಿಕ ಅತ್ಯಾಚಾರ ನಡೆದಿರೋದು ದೃಢಪಟ್ಟಿದೆ. ಜೊತೆಗೆ ಜನನಾಂಗಗಳಿಗೆ ಗಾಯವಾಗಿ ಅತಿಯಾದ ರಕ್ತಸ್ರಾವ ಮತ್ತು ಗಂಟಲು, ಎದೆಯ ಮೂಳೆ ಮುರಿತ ಮತ್ತು ಶ್ವಾಸಕೋಶ ಛಿದ್ರವಾಗಿದ್ದರಿಂದಲೇ ಮಹಿಳೆ ಸಾವನ್ನಪ್ಪಿದ್ದಾಳೆ ಅಂತಾ ವರದಿಯಲ್ಲಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು ದುಷ್ಕೃತ್ಯ ಎಸಗಿದ್ದ ಸೂರಜ್ ಭೋಯ್ ಬಗ್ಗೆ ಮಾಹಿತಿ ಕಲೆಹಾಕಿದ್ರು. ಆತನ ಸಹೋದರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಘಟನೆ ಬಗ್ಗೆ ತನಗೆ ಗೊತ್ತಿಲ್ಲವೆಂದು ಸುಳ್ಳು ಹೇಳಿದ್ದ. ನಂತರ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಜುಲೈ 2ರ ರಾತ್ರಿ ಪೌರಿ ಭಟ ಪ್ರದೇಶದಲ್ಲಿ ಸೂರಜ್ ತಿರುಗಾಡುತ್ತಿದ್ದ. ಈ ವೇಳೆ ಮನೆಯೊಂದರ ಬಾಗಿಲು ತೆರೆದೇ ಇತ್ತು. ಮಹಿಳೆ ಒಂಟಿಯಾಗಿ ಮಲಗಿರುವುದನ್ನು ಗಮನಿಸಿದ ಸೂರಜ್, ಒಳನುಗ್ಗಿ ಆಕೆಯನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಜೋರಾಗಿ ಕಿರುಚಿಕೊಂಡಿದ್ದರಿಂದ ಅವಳನ್ನು ಕೊಂದೇ ಹಾಕಿದ್ದಾನೆ.